ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ದಾಂಡೇಲಿ(Dandeli) ಉತ್ತರ ಕನ್ನಡ(Uttarkannada) ಜಿಲ್ಲೆಯ ದಾಂಡೇಲಿಯ ಮೊಸಳೆ ಪಾರ್ಕ್ ನಲ್ಲಿ(Dandeli Crocodile Park) ಮೊಸಳೆಗಳು ವ್ಯಕ್ತಿಯ ಧ್ವನಿಗೆ ಪ್ರತಿಕ್ರಿಯಿಸಿ ನದಿಯಿಂದ ಓಡಿಬಂದ ಘಟನೆ ನಡೆದಿದೆ.
ಮೊಸಳೆಗಳು ದಡದತ್ತ ಬಂದ ಅಪರೂಪದ ದೃಶ್ಯ(Rare Since) ಪ್ರವಾಸಿಗರ ಗಮನ ಸೆಳೆದಿದೆ.
ದಾಂಡೇಲಿಯ ಮೊಸಳೆ ಪಾರ್ಕ್ಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇಲ್ಲಿನ ಮೊಸಳೆಗಳನ್ನು ವೀಕ್ಷಿಸುವುದು ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರವಾಗಿದೆ.
ಹುಬ್ಬಳ್ಳಿ(Hubli) ಭಾಗದಿಂದ ಬಂದಿದ್ದ ಇಬ್ಬರು ಪ್ರವಾಸಿಗರು ಮೊಸಳೆಗಳನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ, ಮೊಸಳೆಯನ್ನು ಆಕರ್ಷಿಸುವ ರೀತಿಯಲ್ಲಿ ಬಾತಕೋಳಿಯ ಧ್ವನಿ(Duck) ಮಾಡಿದರು ಎನ್ನಲಾಗಿದೆ. ಈ ವೇಳೆ ನದಿಯ ದೂರದ ಭಾಗದಲ್ಲಿದ್ದ ಮೊಸಳೆಯೊಂದು ಆ ಧ್ವನಿಯನ್ನು ಕೇಳಿ ನದಿಯ ದಡದತ್ತ ವೇಗವಾಗಿ ಓಡಿ ಬಂದಿದೆ.
ಈ ಅಪರೂಪದ ದೃಶ್ಯವನ್ನು ಮೊಸಳೆ ಪಾರ್ಕ್ನ (Crocodile Park) ಸ್ಥಳೀಯರಾದ ನಾಗರಾಜ್ ಪಾಟೀಲ್ ಅವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಮೊಸಳೆಯೊಂದು ಧ್ವನಿಗೆ ಪ್ರತಿಕ್ರಿಯಿಸಿ ದಡದತ್ತ ಬರುತ್ತಿರುವ ದೃಶ್ಯ ಅಪರೂಪದ್ದಾಗಿದೆ.
ಮೊಸಳೆ ಪಾರ್ಕ್ ಸುತ್ತಮುತ್ತಲಿನ ನದಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಸಳೆಗಳು ಕಂಡುಬರುತ್ತಿದ್ದು, ಅವುಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ. ಈ ಘಟನೆಯು ದಾಂಡೇಲಿಯ ವನ್ಯಜೀವಿ ಪ್ರವಾಸೋದ್ಯಮದ(Dandeli Wildlife Tourism) ವಿಶೇಷ ಆಕರ್ಷಣೆಯಾಗಿದೆ.
ಎಚ್ಚರಿಕೆ: ಮೊಸಳೆಗಳು ಅಪಾಯಕಾರಿ ಜೀವಿಯಾಗಿದ್ದರಿಂದ ಅವುಗಳನ್ನು ಆಕರ್ಷಿಸಲು ಧ್ವನಿ ಮಾಡುವುದು, ಆಹಾರ ನೀಡುವುದು ಅಥವಾ ಅವುಗಳ ಸಮೀಪ ಹೋಗಲು ಪ್ರಯತ್ನಿಸುವುದು ಅಪಾಯಕಾರಿ. ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.