ಮುರ್ಡೇಶ್ವರ (Murdeshwar): ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟು, ಇನ್ನೂ ಮೂವರು ನಾಪತ್ತೆಯಾದ ಹೃದಯವಿದ್ರಾವಕ ಘಟನೆ ಮುರ್ಡೇಶ್ವರದಲ್ಲಿ(Murdeshwar) ನಡೆದಿದೆ.
ಶ್ರಾವಂತಿ (15) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಕೋಲಾರ ಮೂಲದ(Kolara Native) ಇನ್ನೂ ಮೂವರು ಪ್ರವಾಸಿ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಮೂವರು ವಿದ್ಯಾರ್ಥಿಗಳನ್ನ ರಕ್ಷಣೆ ಮಾಡಲಾಗಿದೆ. ರಕ್ಷಣೆಗೊಳಗಾದವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ದೀಕ್ಷಾ, ಲಾವಣ್ಯ ಮತ್ತು ಲಿಪಿಕಾ ನಾಪತ್ತೆಯಾದ ವಿದ್ಯಾರ್ಥಿಗಳಾಗಿದ್ದಾರೆ. ಕೋಲಾರದ ಮುಳಬಾಗಿಲು(Kolara Mulabagilu) ಮೂಲದ 54 ವಿದ್ಯಾರ್ಥಿಗಳು ಮುರ್ಡೇಶ್ವರ ಪ್ರವಾಸಕ್ಕೆ (Murdeshwar Tour)ಬಂದಿದ್ದರು. ಸಂಜೆ ವೇಳೆ ಈಜುವ ವೇಳೆ ದುರ್ಘಟನೆ ನಡೆದಿದೆ.
ಮುರುಡೇಶ್ವರ ಪೊಲೀಸ್ ಠಾಣಾ (Murdeshwar Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನಾಪತ್ತೆಯಾದವರ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ.
ಯಾರುಹೊಣೆ : ಮುರ್ಡೇಶ್ವರದಲ್ಲಿ ಈ ರೀತಿಯಾಗಿ ದುರಂತಕ್ಕೆ ಪ್ರವಾಸಿಗರು ಸಿಲುಕಿದಾಗ ಸಂಬಂಧಪಟ್ಟ ಜಿಲ್ಲಾಡಳಿತ ಇಲ್ಲಿ ಕರ್ತವ್ಯ ನಿರ್ವಹಿಸುವ ಲೈಫ್ ಗಾರ್ಡ್ ಸಿಬ್ಬಂದಿಗಳಿಗೆ ಅಗತ್ಯ ಪರಿಕರಗಳನ್ನ ಒದಗಿಸಿದರೆ ತಕ್ಷಣ ಕಾರ್ಯಾಚರಣೆ ಮಾಡಲು ಅನುಕೂಲವಾಗುತ್ತದೆ. ಆದರೆ ಕೊರತೆ ನಡುವೆ ಜೀವ ರಕ್ಷಕ ಸಿಬ್ಬಂದಿಗಳು ತಮ್ಮ ಜೀವ ಒತ್ತೆಯಿಟ್ಟು ಪ್ರವಾಸಿಗರ ಜೀವ ರಕ್ಷಿಸಬೇಕಾಗಿರುವುದು ದುರಂತ. ಇನ್ನಾದರೂ ಸಂಬಂಧಪಟ್ಟವರು ಯೋಚಿಸಬೇಕಾಗಿದೆ ಎಂದು ಬಂದಂಥ ಪ್ರವಾಸಿಗರು ಹೇಳಿದ್ದಾರೆ.
ಇದನ್ನು ಓದಿ : ಡಿಸೆಂಬರ್ 13 ರಂದು ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಸಭೆ
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೂಟಕ್ಕೆ ಬೇಡಿಕೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ವಿನೂತನ ಪ್ರತಿಭಟನೆ.
ಎಸ್ ಎಂ ಕೆ ನಿಧನ. ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ.
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಇನ್ನೂ ನೆನಪು ಮಾತ್ರ.
.