ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) : ದೀಪಾವಳಿ ಹಬ್ಬವಾಗಿದ್ದರಿಂದ ಮನೆಯಲ್ಲಿ ಹಚ್ಚಿದ್ದ ಹಣತೆ ದೀಪ ಬಟ್ಟೆಗೆ ಬೆಂಕಿ ತಗುಲಿ, ಮನೆಗೆ ಕೊಂಚ ಪ್ರಮಾಣದ ಬೆಂಕಿ ತಗುಲಿದ ಘಟನೆ ಕಾರವಾರ (Karwar) ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ವಿದ್ಯಾಲಯದ ಸಮೀಪ ಸಂಭವಿಸಿದೆ.



ಇಲ್ಲಿನ ನಿವಾಸಿ ಶೀತಲ್ ಪಾತಾರೆ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ಅವಘಢ ಸಂಭವಿಸಿದೆ. ಭಾನುವಾರ ರಾತ್ರಿ ಸ್ಟೇರ್ಕೇಸ್ ಕೆಳಗೆ ದೀಪದ ಹಣತೆಯನ್ನು ಇಡಲಾಗಿತ್ತು. ಹಣತೆಯ ಜ್ವಾಲೆ ಸಮೀಪದಲ್ಲಿದ್ದ ಹಳೆಯ ಬಟ್ಟೆಗಳಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ವಿಲ್ಸನ್ ಫರ್ನಾಂಡಿಸ್ ಅವರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು(Fire Brigade) ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕ್ಷೀಪ್ರ ಕಾರ್ಯಾಚರಣೆಯಿಂದಾಗಿ ಬಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ ಅವರ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಸಪ್ನಿಲ್ ಪೇಡ್ನೇಕರ, ಮಿಥುನ್ ಅಂಕೊಲೇಕರ್, ಭರತಕುಮಾರ ಜಿ.ಎಸ್. ಹಾಗೂ ಚಾಲಕ ಕೃಷ್ಣ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

