ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) :  ಉತ್ತರಕನ್ನಡ (Uttarkannada) ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾರವಾರ ನಗರದಲ್ಲೂ ಬೆಳಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದೆ.

ಮಕ್ಕಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕಾರವಾರ(Karwar) ತಾಲೂಕಿನ ಎಲ್ಲಾ ಅಂಗನವಾಡಿ(Anganawadi),  ಪ್ರಾಥಮಿಕ(Primary) ಹಾಗೂ ಪ್ರೌಢಶಾಲೆಗಳಿಗೆ(Highschool) ರಜೆ ಘೋಷಿಸಲಾಗಿದೆ.

ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು(Karwar BEO) ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ರಜೆಯಿಂದ ಉಂಟಾಗುವ ಕಲಿಕಾ ನಷ್ಟವನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಮಳೆಯ ತೀವ್ರತೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದ ಎರಡು ದಿನ ರೆಡ್ ಅಲರ್ಟ್(Red Alert) ಇದ್ದು ಜನತೆ ಎಚ್ಚರದಿಂದಿರುವಂತೆ ಹವಾಮಾನ ಇಲಾಖೆ ಸೂಚಿಸಿದೆ.