ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal) : ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿ ಮೀನುಗಾರರ ಸಹಕಾರಿ ಸಂಘ ನಿ. ಇದರ ನಿವೃತ್ತ ಮುಖ್ಯ ಕಾರ್ಯನಿರ್ವಾಹಕರಾದ  ನಾರಾಯಣ ಎನ್. ಮೊಗೇರ ಇವರಿಗೆ 2025-26 ನೇ ಸಾಲಿನ ಸಹಕಾರಿ ಕ್ಷೇತ್ರದ ಸಾಧನೆಗಾಗಿ “ಭಟ್ಕಳ ತಾಲೂಕಿನ ಉತ್ತಮ ನೌಕರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇತ್ತೀಚಿಗೆ ದಿ. ಹೊನ್ನಾವರ ಅರ್ಬನ್ ಕೋ-ಆಪ್ ಬ್ಯಾಂಕ್ ಹೊನ್ನಾವರ ಇದರ ಸಭಾಭವನದಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ 2026 ರ ಸಮಾರಂಭ ನಡೆಯಿತು. ಉತ್ತರಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿ. ಕುಮಟಾ ಇವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ವಿ. ಎನ್. ಭಟ್ ಅಳ್ಳಂಕಿ ರವರು  ನಾರಾಯಣ ಎನ್. ಮೊಗೇರ ಇವರಿಗೆ  ಸಹಕಾರಿ ಕ್ಷೇತ್ರದ ಸಾಧನೆಗಾಗಿ ಉತ್ತಮ ನೌಕರ ಪ್ರಶಸ್ತಿ” ನೀಡಿ ಗೌರವಿಸಿದರು.

ತಮಗೆ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ ಉತ್ತರಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿ. ಕುಮಟಾ ಇದರ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಮುಖ್ಯಕಾರ್ಯನಿರ್ವಾಹಕರವರಿಗೆ ನಾರಾಯಣ ಮೊಗೇರ ಅವರು  ಅಭಿನಂದನೆ ಸಲ್ಲಿಸಿದ್ದಾರೆ‌.