ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಂಗಳೂರು(Mangalore): ಕೋವಿಡ್(Covid) ಸಮಯದಲ್ಲಿ ಹೆಚ್ಚಿಸಿದ ರೈಲ್ವೆ ಟಿಕೆಟ್(Train Ticket) ದರವನ್ನು ಕಡಿಮೆ ಮಾಡಿ ಸಿಹಿ ಸುದ್ದಿ ನೀಡಿದೆ.

ಆಗ ಕಾಯ್ದಿರಿಸದ ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೆ ರದ್ದುಗೊಳಿಸಿ ವಿಶೇಷ ಸೂಪರ್ ಫಾಸ್ಟ್ ರೈಲಾಗಿ(Superfast Train) ಪರಿವರ್ತನೆ ಮಾಡಿತ್ತು. ಇದರಿಂದಾಗಿ ದರಗಳು ಹೆಚ್ಚಾಗಿ, ರೈಲ್ವೆ ಪ್ರಯಾಣಿಕರಿಗೆ ಜನರಿಗೆ ತೊಂದರೆ ಆಗಿತ್ತು. ಇದೀಗ ಕರ್ನಾಟಕದ ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ(Indian Railway) ಸಿಹಿಸುದ್ದಿಯನ್ನು ನೀಡಿದೆ.

ಮಂಗಳೂರು ಸೆಂಟ್ರಲ್-ಮಡಗಾಂವ್ (Mangluru Central- Madagam) ವಿಶೇಷ ಎಕ್ಸ್‌ಪ್ರೆಸ್ ರೈಲು ದರವನ್ನು ಕಡಿಮೆ ಮಾಡಲಾಗಿದೆ. ಮಾರ್ಚ್‌ 1ರಿಂದಲೇ ಜಾರಿಗೆ ಬರುವಂತೆ ಈ ರೈಲು ಕಾಯ್ದಿರಿಸದ ರೈಲಾಗಿ ಸಂಚಾರವನ್ನು ನಡೆಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ ದರ, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮಾರ್ಗದಲ್ಲಿ ವಂದೇ ಭಾರತ್ ರೈಲು(Vande Bharat) ಸಹ ಸಂಚಾರವನ್ನು ನಡೆಸುತ್ತಿರುವುದು ವಿಶೇಷವಾಗಿದೆ.

ಮಾರ್ಚ್‌ 1 ರಿಂದ ಮಾರ್ಚ್ ಒಂದರಿಂದ ಮಂಗಳೂರು ಸೆಂಟ್ರಲ್-ಮಡಗಾಂವ್-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 56616/ 615 ಸಂಪೂರ್ಣ ಕಾಯ್ದಿರಿಸದ ರೈಲಾಗಿ ಸಂಚಾರವನ್ನು ನಡೆಸುತ್ತದೆ. ಇದರಿಂದಾಗಿ ದರಗಳು ಕಡಿಮೆಯಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಕೊಂಕಣ ರೈಲ್ವೆ (Konkan Railway) ಮತ್ತು ದಕ್ಷಿಣ ರೈಲ್ವೆ(Southern Railway) ಜಂಟಿಯಾಗಿ ಮಂಗಳೂರು-ಮಡಗಾಂವ್(Mangaluru-Madagaum) ರೈಲನ್ನು ಸಂಪೂರ್ಣ ಕಾಯ್ದಿರಿಸದ ರೈಲಾಗಿ ಓಡಿಸಲು ಒಪ್ಪಿಗೆ ಕೊಟ್ಟಿದ್ದರಿಂದ ರೈಲಿನ ದರಗಳು ಶೇ 40ರಷ್ಟು ಕಡಿಮೆಯಾಗಲಿದೆ. ಈ ರೈಲು 18 ಬೋಗಿಯನ್ನು ಹೊಂದಿದೆ. ಗೋವಾ-ಮಂಗಳೂರು(Goa-Mangaluru) ಸಂಪರ್ಕಿಸುವ ಪ್ರಮುಖ ರೈಲು ಇದಾಗಿದೆ.

ರೈಲ್ವೆ ಸಂಚಾರದ  ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ವಿಶೇಷ ಎಕ್ಸ್‌ಪ್ರೆಸ್ ರೈಲಿನಲ್ಲಿ ಕನಿಷ್ಠ ಪ್ರಯಾಣ ದರ 30 ರೂ. ಇದ್ದರೆ, ಪ್ಯಾಸೆಂಜರ್ ರೈಲಿನಲ್ಲಿ ಅದು 10 ರೂ. ಆಗುತ್ತದೆ.
ಮಾರ್ಚ್ 1ರಿಂದ ಅನ್ವಯವಾಗುವಂತೆ ಮಂಗಳೂರು ಸೆಂಟ್ರಲ್-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾಯ್ದಿರಿಸದ ರೈಲಾಗಿ ಸಂಚಾರ ನಡೆಸಲಿದೆ. ಇದರಿಂದ ರೈಲಿನ ದರ ಇಳಿಕೆಯಾಗಲಿದೆ. ಫೆಬ್ರವರಿ 28ರ ತನಕ ಮಂಗಳೂರು ಸೆಂಟ್ರಲ್-ಮಡಗಾಂವ್ ನಡುವಿನ ಪ್ರಯಾಣ ದರ 150 ರೂ. ಇತ್ತು, ಇದು 85 ರೂ.ಗಳಿಗೆ ಇಳಿಕೆಯಾಗಿದೆ.

ಮಂಗಳೂರು-ಕಾರವಾರ(Mangluru-Karwar) ನಡುವಿನ ದರ 125 ರೂ. ನಿಂದ 75 ರೂ.ಗಳಿಗೆ ಇಳಿಕೆಯಾಗಲಿದೆ. ಮಂಗಳೂರು-ಭಟ್ಕಳ (Bhatkal) ದರ 75 ರೂ. ನಿಂದ 45 ರೂ., ಮಂಗಳೂರು-ಕುಂದಾಪುರ(Kundapur) ದರ 60 ರೂ. ನಿಂದ 30 ರೂ, ಮಂಗಳೂರು ಸೆಂಟ್ರಲ್-ಉಡುಪಿ(Udupi) ನಡುವಿನ ದರ 45 ರೂ. ನಿಂದ 25 ರೂ.ಗೆ ಇಳಿಕೆಯಾಗುತ್ತಿದೆ.

ರೈಲು ಸಂಖ್ಯೆ 56616 ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 5.30ಕ್ಕೆ ಹೊರಡಲಿದ್ದು ಮಡಗಾಂವ್‌ಗೆ 1.30ಕ್ಕೆ ತಲುಪಲಿದೆ. ರೈಲು ನಂಬರ್ 56615 ಮಂಡಗಾಂವ್‌ನಿಂದ 1.50ಕ್ಕೆ ಹೊರಟು, ಮಂಗಳೂರು ಸೆಂಟ್ರಲ್‌ಗೆ ರಾತ್ರಿ 11.05ಕ್ಕೆ ತಲುಪಲಿದೆ.

ಇದನ್ನು ಓದಿ : ಕುಂಭಮೇಳದಲ್ಲಿ ಕಾಣೆಯಾದವ ಮನೆಯಲ್ಲಿ ಪ್ರತ್ಯಕ್ಷ.

ಕರಾವಳಿಯಲ್ಲಿ ಹೆಚ್ಚಾಗುತ್ತಿದೆ ಬಿಸಿಲ ಧಗೆ..ಎಚ್ಚರ! ಎಚ್ಚರ !