ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಶಿರಸಿ(Sirsi) : ಬಿಜೆಪಿ ಅಲ್ಪಸಂಖ್ಯಾತ ಮುಖಂಡನ(BJP Minority Leader) ಹತ್ಯೆ ಯತ್ನ ಪ್ರಕರಣದ ಆರೋಪ ಸಾಬೀತಾಗಿದ್ದು, ಆರು ಮಂದಿ ಆರೋಪಿಗಳಿಗೆ 10 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಹತ್ವದ ತೀರ್ಪು(Judgment) ನೀಡಿದೆ.

ನ್ಯಾಯಾಧೀಶರಾದ ಕಿರಣ ಕಿಣಿ ಅವರು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಶಿಕ್ಷೆಗೆ ಗುರಿಯಾದವರನ್ನು ಮಹಮ್ಮದ ಫಾರೂಕ್ ಮಹಮ್ಮದ ಶಫೀವುಲ್ಲಾ ಪಟೇಲ್, ಮಹಮ್ಮದ ಸಲೀಂ ಅಲಿಯಾಸ ಸಾಗರ ಭಾಷಾ ಅಬ್ದುಲ್ ರಹೀಂ ಕೆ, ಸರ್ಫರಾಜ್ ಮಹಮ್ಮದ ಶಫೀವುಲ್ಲಾ ಪಟೇಲ್, ಮಹಮ್ಮದ ಆರೀಪ್ ಅಲಿಯಾಸ ಆರೀಪ್ ದವಲ್ ಸಾಬ್ ಕರ್ಜಗಿ, ನಿಸ್ಸಾರ ಅಹ್ಮದ ಖಾಸೀಂಸಾಬ ಶೇಖ್ ಹಾಗೂ ಮೌಸಿನ್ ಅಬ್ದುಲ್ ಶುಕೂರ ಹೊನ್ನಾವರ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಎಸ್ಡಿಪಿಐ ಕಾರ್ಯಕರ್ತರೆಂದ ಹೇಳಲಾಗಿದೆ.

ಪ್ರತಿಯೊಬ್ಬರಿಗೂ ತಲಾ 18 ಸಾವಿರ ರೂಪಾಯಿ ದಂಡ ವಿಧಿಸಿದೆ. ಪ್ರತಿಯೊಬ್ಬ ಆರೋಪಿಗಳು ಗಾಯಾಳು ಮಹಮ್ಮದ అనిಶ್ ಅವರಿಗೆ ತಲಾ 10 ಸಾವಿರ ರೂಪಾಯಿಯಂತೆ  ಒಟ್ಟು 60 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶಿಸಿದೆ.

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ(Sirsi Market Station) ಅಂದಿನ ತನಿಖಾಧಿಕಾರಿ ಶಶಿಕುಮಾರ ಸಿ.ಆರ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಪೊಲೀಸ್ ಹೆಡ್ ಕಾನ್ಸೆಬಲ್‌ಗಳಾದ ಬಿ.ಆರ್. ಹನುಮಂತ ಹಾಗೂ ರಮೇಶ ಮುಚ್ಚಂಡಿ ಅವರು ಸಾಕ್ಷಿ ವಿಚಾರಣೆಯ ಸಮಯದಲ್ಲಿ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ(Court Produce) ಪ್ರಮುಖ ಪಾತ್ರ ವಹಿಸಿದ್ದರು.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ಅವರು ಸುದೀರ್ಘ ವಾದ ಮಂಡಿಸಿದ್ದರು. ಪ್ರಕರಣದ ಗಾಂಭೀರ್ಯತೆ ಮತ್ತು ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ. ಅಲ್ಲದೆ, ಗಾಯಾಳುಗಳು ಜಿಲ್ಲಾ ಉಚಿತ ಕಾನೂನು ಪ್ರಾಧಿಕಾರದಿಂದಲೂ ಪರಿಹಾರ ಪಡೆಯಲು ಅವಕಾಶ ಕಲಿಸಲಾಗಿದೆ.

ಕೊಲೆ ಮಾಡಲು ಬಂದವನೇ ಧಾರುಣ ಸಾವು:
2019ರ ಏಪ್ರಿಲ್ 23 ರಂದು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ನಡೆದಿದ್ದು, ಚುನಾವಣೆ ನಡೆದ ಮರುದಿನವೇ ಶಿರಸಿ ನಗರದ ಕಸ್ತೂರುಬಾ(Sirsi Kasturba Nagar) ಬಡಾವಣೆಯಲ್ಲಿ ಅಸ್ಲಾಂ ಎನ್ನುವ ಯುವಕನ ಶವ ಪತ್ತೆಯಾಗಿತ್ತು. ಮಾರಕಾಸ್ತ್ರದಿಂದ ಹೊಡೆದು ಅಸ್ಲಾಂನನ್ನ ಕೊಲೆ ಮಾಡಿದ್ದು ರಕ್ತದ ಮಡುವಿನಲ್ಲಿ ಅಸ್ಲಾಂ ಶವವಾಗಿ ಬಿದ್ದಿದ್ದು ಕಂಡು ಬಂದಿತ್ತು. ಇನ್ನು ಚುನಾವಣೆ ನಡೆದ ದಿನವೇ ಶವ ಪತ್ತೆಯಾದ ಸಮೀಪದಲ್ಲಿಯೇ ಜಿಲ್ಲಾ ಬಿಜೆಪಿ(District BJP) ಅಲ್ಪಸಂಖ್ಯಾತ ಮೋರ್ಚದ ಉಪಾಧ್ಯಕ್ಷ ಅನೀಶ್ ಎನ್ನುವವನ ಮೇಲೆ ಮಾರಣಾಂತಿಕ ಹಲ್ಲೆ ಸಹ ನಡೆದಿತ್ತು.

ಅನೀಶ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು, ಅನೀಶ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಶಿರಸಿ ಮಾರುಕಟ್ಟೆ ಠಾಣೆಯ(Sirsi Market Station) ಪೊಲೀಸರು ಅನೀಶ್ ಮೇಲೆ ನಡೆದ ದಾಳಿಯ ಪ್ರಕರಣದಲ್ಲಿಯೇ ಅಸ್ಲಾಂ ಕೊಲೆಯಾಗಿರಬಹುದು ಎಂದು ಅಂದಾಜಿಸಿದ್ದರು.

ಪ್ರಕರಣ ಹಿಂದೆ ಬಿದ್ದು ತನಿಖೆ ನಡೆಸಿದ ವೇಳೆಯಲ್ಲಿ ಘಟನೆ ನಡೆದ ಸ್ಥಳದಲ್ಲಿಯೇ ಕಾರೊಂದು ಪತ್ತೆಯಾಗಿದ್ದು ಪೊಲೀಸರು ಕಾರು ಯಾರದೆಂಬ ತನಿಖೆಯನ್ನ ನಡೆಸಿದ್ದರು. ಅಂತಿಮವಾಗಿ ತನಿಖೆ ನಡೆಸಿದ ಪೊಲೀಸರು 9 ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಅಸ್ಲಾಂ ಸ್ನೇಹಿತರ ಜೊತೆ ಅನೀಶ್‌ನ ಕೊಲೆ ಮಾಡಲೆಂದು ಕಾರಿನಲ್ಲಿ ಬಂದಿದ್ದು ಗಲಾಟೆ ನಡೆದ ಸಂಧರ್ಭದಲ್ಲಿ ಅಸ್ಲಾಂ ಜೊತೆಯಲ್ಲಿದ್ದವರೇ ಅನೀಶ್ ಮೇಲೆ ಚಾಕು ಇರಿತಕ್ಕೆ ಮುಂದಾದಾಗ ಅಸ್ಲಾಂ ಕೈಗೆ ಚಾಕು ತಾಗಿದ್ದು, ತೀವ್ರ ರಕ್ತ ಸ್ರಾವದಿಂದ ಅಸ್ಲಾಂ ಸಾವನ್ನಪ್ಪಿದ್ದನು ಎನ್ನುವ ಅಂಶವನ್ನ ಪೊಲೀಸರು ತನಿಖೆಯಿಂದ ಬಯಲಿಗೆಳೆದಿದ್ದರು. ಕೊಲೆಗೆ ರಾಜಕೀಯ ದ್ವೇಷವೇ ಮುಖ್ಯ ಕಾರಣ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿತ್ತು.

ಇದನ್ನು ಓದಿ : ರೀಲ್ಸ್ ರಾಣಿ ಸಹವಾಸ. ಜ್ಯೋತಿಷ್ಯ ಹೇಳುವವ ಜೈಲುವಾಸ.

ಭಟ್ಕಳ ಆಟೋ ಚಾಲಕನ ಮಾನವೀಯತೆ. ಬಂಗಾರವಿದ್ದ ಬ್ಯಾಗ್ ಮರಳಿ ಪ್ರಯಾಣಿಕರಿಗೆ.

ಮುರ್ಡೇಶ್ವರದಲ್ಲಿ  ನಿವತ್ತ ಯೋಧನಿಗೆ ಅದ್ದೂರಿ ಸ್ವಾಗತ. ಎಲ್ಲೆಡೆ ಜಯಕಾರ.