ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ದಾಂಡೇಲಿ (Dandeli) : ಪ್ರವಾಸಕ್ಕೆಂದು ತೆರಳುತ್ತಿದ್ದ ಪ್ರವಾಸಿಗರ ವಾಹನ ಅಪಘಾತಗೊಂಡ ಘಟನೆ ಹಳಿಯಾಳ – ದಾಂಡೇಲಿ(Haliyal-Dandeli) ರಸ್ತೆಯ ತಾಟಗೇರಾ ಕ್ರಾಸ್(Tatagera Cross) ಬಳಿ ಸಂಭವಿಸಿದೆ
ಹುಬ್ಬಳ್ಳಿಯಿಂದ ದಾಂಡೇಲಿ(Hubli to Dandeli) ಕಡೆ ಇನ್ನೋವಾ ಕಾರು(Innova Car) ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯ ಕೆಳ ಭಾಗಕ್ಕೆ ಬಿದ್ದಿದೆ. ಘಟನೆಯಲ್ಲಿ ಒಟ್ಟು ಎಂಟು ಜನರಿಗೆ ಗಾಯವಾಗಿದ್ದು ಓರ್ವನಿಗೆ ಗಂಭೀರ ಗಾಯವಾಗಿದೆ
ಗಾಯಗೊಂಡವರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದು ಚಿಕಿತ್ಸೆ ನೀಡಲಾಗಿದೆ.ಗಾಯಳುಗಳ ಪೈಕಿ ಇನ್ನೂ ಮೂವರನ್ನ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ.
ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಠಾಣೆಯ(Dandeli Rural Station) ಪಿಎಸ್ಐ ಜಗದೀಶ್, ಎಎಸ್ಐ ವೆಂಕಟೇಶ ತೆಗ್ಗಿನ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಹುಡುಗಿಗೋಸ್ಕರ ವಿದ್ಯಾರ್ಥಿಗಳ ನಡುವೆ ಜಗಳ
ಜಲಪಾತ ನೋಡಲು ಹೋದ ಯುವಕರು ಬದುಕಿ ಬರಲಿಲ್ಲ.
ಮೊನಾಲಿಸಾ ಈಗ ಪ್ರಸಿದ್ದ ಚಿನ್ನಾಭರಣ ಮಳಿಗೆಯ ಬ್ರಾಂಡ್ ಅಂಬಾಸಿಡರ್