ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ನಗರದಹೆಂಜಾನಾಯ್ಕ ವೃತ್ತದ(Henja Naik Circle) ಬಳಿ ಬಾರೀ ಗಾತ್ರದ ಮರದ ಟೊಂಗೆಯೊಂದು ಬಿದ್ದ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ.
ಅದೃಷ್ವಶಾತ್ ಬೆಳಗಿನ ಜಾವ ಘಟನೆ ಸಂಭವಿಸಿದ್ದರಿಂದ ಬಾರೀ ಅಪಾಯವೊಂದು ತಪ್ಪಿದಂತಾಗಿದೆ. ಬೆಳಿಗ್ಗೆ ಐದು ಗಂಟೆ ಸುಮಾರಿಗೆ ನಗರದ ಬಾಯಿಕುವರಬಾಯಿ ಶಾಲೆ(Bayikuvarabayi School) ಆವರಣದಲ್ಲಿದ್ದ ಮಾವಿನ ಮರ ಬಿದ್ದಿದೆ. ಬೆಳಿಗ್ಗೆಯಿಂದ ಸಂಜೆ ವರೆಗೂ ಜನಸಂದಣಿ ಇರುತ್ತಿದ್ದ ಸ್ಥಳವಿದು. ಹತ್ತಿರದ ಶಾಲೆಗೆ ತೆರಳುವ ಮಕ್ಕಳು, ವ್ಯಾಪಾರಕ್ಕೆ ಬರುವ ಗ್ರಾಮೀಣ ಭಾಗದ ವ್ಯಾಪಾರಸ್ಥರು(Rural area vendors) ಈ ಜಾಗದಲ್ಲಿಯೇ ಕೂರುತ್ತಿದ್ದರು.
ಬೆಳಿಗ್ಗೆ ಐದು ಗಂಟೆಯ ವೇಳೆ ಮರ ಬಿದ್ದಿದರಿಂದ ಯಾವುದೇ ತೊಂದರೆಯಾಗಿಲ್ಲ. ತಕ್ಷಣವೇ ನಗರಸಭೆ ಸಿಬ್ಬಂದಿಗಳು(CMC) ಸ್ಥಳಕ್ಕೆ ಧಾವಿಸಿ ಬಿದ್ದ ಮರವನ್ನ ತೆರವುಗೊಳಿಸಿದ್ದಾರೆ. ಹೀಗಾಗಿ ಸಂಚಾರ ಎಂದಿನಂತೆ ಸಾಗಿದೆ.
