ದಾಂಡೇಲಿ(Dandeli) : ದ್ವಿಚಕ್ರ ವಾಹನವೊಂದನ್ನ
ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು  ದಗದಗನೆ ಹೊತ್ತಿ ಉರಿದ ಘಟನೆ ದಾಂಡೇಲಿಯಲ್ಲಿ ನಡೆದಿದೆ.

ನಗರದ ದಮನಗರದ ಸೋಮಾನಿ ವೃತ್ತದ(Somani circle) ಹತ್ತಿರ ಮಂಗಳವಾರ ಸಂಜೆ  ಈ ಘಟನೆ ಸಂಭವಿಸಿದೆ. ಸ್ಥಳೀಯ ಟೌನಶಿಪ್ (Township) ನಿವಾಸಿಯೊಬ್ಬರು ಸೋಮಾನಿ ವೃತ್ತದ ಹತ್ತಿರವಿರುವ ಅಶೋಕ್ ಮೇಸ್ತ್ರಿಯವರ ಗ್ಯಾರೇಜಿಗೆ ದುರಸ್ತಿಗೆಂದು  ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ತಂದಿದ್ದರು. ಮೆಕಾನಿಕ್ ಅಶೋಕ್ ಮೇಸ್ತ್ರಿ ಅವರು ದುರಸ್ತಿ ಮಾಡುವ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಸ್ಥಳಕ್ಕೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ (Westcoast Paper Mill) ಅಗ್ನಿಶಾಮಕ ದಳದ ವಾಹನ ದೌಡಾಯಿಸಿ ಬೆಂಕಿಯನ್ನು ನಂದಿಸಿದರಾದರೂ  ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಇದನ್ನು ಓದಿ : ಅತಿಕ್ರಮಿಸಿದ ಭೂಮಿ ಕಬ್ಜಾ ಮಾಡಿಕೊಳ್ಳಿ, ಅರಣ್ಯಧಿಕಾರಿಗೆ ಗ್ರಾಮಸ್ಥರ ಮನವಿ

ಕುಡಿದ ಮತ್ತಿನಲ್ಲಿ ಸ್ನೇಹಿತನ ಹತ್ಯೆ

ಗೋವು ಕಳ್ಳತನ ಮಾಡುತ್ತಿರುವ ಆಸಾಮಿಗಳಿಗೆ ಪೊಲೀಸರ ಡ್ರಿಲ್

ಬಟ್ಟೆ, ಪ್ಯಾನ್ಸಿ ಅಂಗಡಿಯಲ್ಲಿ ಕಳ್ಳಿಯರ ಕಾಟ. ಬಿತ್ತು ಧರ್ಮದೇಟು