ಶಿರಸಿ : ರಾಜ್ಯದಲ್ಲಿ ಇಂದು ಎಸ್ ಎಸ್ ಎಲ್ ಫಲಿತಾಂಶ ಪ್ರಕಟವಾಗಿದೆ. .ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರ ಅತ್ಯದ್ಭುತ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ಇನ್ನೂ ಶಿರಸಿ ಮೂವರು ಮಕ್ಕಳು 625ಕ್ಕೆ 624 ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಶಿರಸಿ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ದರ್ಶನ ಭಟ್, ಭೈರೂಂಬೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶ್ರೀರಾಮ ಕೆ ಎಂ ಮತ್ತು ಗೋಳಿ ಪ್ರೌಢ ಶಾಲೆಯ ಚಿನ್ಮಯಿ ಹೆಗಡೆ .ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದಿದ್ದಾರೆ.
ಶಾಲಾ ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕ ವೃಂದ ಮತ್ತು ಅಧಿಕಾರಿಗಳು ಅಭಿನಂದಿಸಿದ್ದಾರೆ. ಈ ಬಾರಿ ಉತ್ತರಕನ್ನಡ 5ನೆ ಸ್ಥಾನ ಮತ್ತು ಶಿರಸಿ 8ನೆ ಸ್ಥಾನ ಪಡೆದುಕೊಂಡಿದೆ