ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾKumta) : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ(NH 66) ಬೈಕ್ ಮತ್ತು ಕಾರು(Bike-Car) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಹೋದರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಕುಮಟಾ ತಾಲೂಕಿನ ಬರ್ಗಿ ಗ್ರಾಮದ(Bargi Village) ಬಳಿ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಬೆಟ್ಕುಳಿ ಗ್ರಾಮದ ಗುರು ಹರಿಕಾಂತ ಹಾಗೂ ವಿಠ್ಠಲ ಹರಿಕಾಂತ ಎಂದು ಗುರುತಿಸಲಾಗಿದೆ. ಇವರು ಬೈಕ್ ನಲ್ಲಿ ಹೆದ್ದಾರಿ ಕ್ರಾಸ್ ಮಾಡುವ ವೇಳೆ ತೆಲಂಗಾಣ(Telangana) ನೋಂದಣಿ ಸಂಖ್ಯೆಯ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಬೈಕ್ ಹಾಗೂ ಕಾರು ಎರಡೂ ಸಂಪೂರ್ಣ ಜಖಂಗೊಂಡಿವೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ತಕ್ಷಣವೇ ಕುಮಟಾ ಸರ್ಕಾರಿ ಆಸ್ಪತ್ರೆಗೆ(Kumta Government Hospital) ದಾಖಲಿಸಲಾಗಿದೆ.
ಘಟನೆ ಗೋಕರ್ಣ ಪೊಲೀಸ್ ಠಾಣಾ(Gokarn Police Station) ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ, ಅಪಘಾತದ ನಂತರ ಹೈವೇ ಅಂಬುಲೆನ್ಸ್(Highway Ambulance) ಸಮಯಕ್ಕೆ ಬರದ ಹಿನ್ನೆಲೆ ಗಾಯಾಳುಗಳನ್ನು ಖಾಸಗಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಬೇಕಾಯಿತು. ಅಂಬುಲೆನ್ಸ್ ಸೇವೆಯ ಅವ್ಯವಸ್ಥೆ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಸಚಿವ ಮಂಕಾಳ ವೈದ್ಯ ವಿರುದ್ದ ಮಾಸ್ತಪ್ಪ ನಾಯ್ಕ ತೀವೃ ವಾಗ್ದಾಳಿ. ಎಣ್ಣೆ ಬಾಟಲಿ ತೋರಿಸಿ ಆಕ್ರೋಶ.
ಭಟ್ಕಳದಲ್ಲಿ ರೈಲಿನಿಂದ ಬಿದ್ದು ಕಾರವಾರದ ವ್ಯಕ್ತಿ ಸಾವು.
ಸಚಿವರ, ಮಹಿಳೆಯರ ಬಗ್ಗೆ ನಿರಂತರ ತೇಜೋವಧೆ. ಮಾಸ್ತಪ್ಪ ನಾಯ್ಕ ಅವರಿಗೆ ಕಠಿಣ ಉತ್ತರದ ಎಚ್ಚರಿಕೆ.
