ಮುಂಡಗೋಡ(Mundgod) : ತಾಲೂಕಿನ ಮೀಟರ್ ಬಡ್ಡಿ(Meter interest) ಕುಳಗಳಿಗೆ ಮುಂಡಗೋಡು ಪೊಲೀಸರು ಶಾಕ್ ನೀಡಿದ್ದಾರೆ.
ಸಿಪಿಐ ರಂಗನಾಥ್ ನೀಲಮ್ಮನವರ ನೇತೃತ್ವದಲ್ಲಿ ಇಂದು ಮೀಟರ್ ಬಡ್ಡಿಕುಳಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ವಿಷಯವನ್ನು ಗೌಪ್ಯವಾಗಿ ಇಟ್ಟಿದ್ದ ಸಿಪಿಐ(CPI) ಅವರು ಸಂಜೆ ಐದು ತಂಡಗಳನ್ನು ರಚಿಸಿ ಆಯಾ ತಂಡಗಳು ಆಯಾ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿವೆ.
ಪಿಎಸೈಗಳಾದ ಪರಶುರಾಮ ಮಿರ್ಜಗಿ, ಸಿದ್ದು ಗುಂಡಿ, ನಸರಿನ್ ಚಟರ್ಕಿ ಹಾಗೂ ಮಹಾವೀರ ಕಾಂಬಳೆ ದಾಳಿ ನಡೆಸಿದ್ದರು. ಮೀಟರ್ ಬಡ್ಡಿ ಕುಳಗಳಾದ ಪಟ್ಟಣದ ಮಂಜುನಾಥ್ ನವಲೆ, ಕಿರಣ್ ಸೊಳಂಕಿ, ವಸಂತ , ಮಲಿಕಜಾನ ಹಾಗೂ ಗ್ರಾಮಾಂತರ ಪ್ರದೇಶದ ಮಂಜುನಾಥ ಮನೆಗಳ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಯಿತು.
ದಾಳಿಯ ಸಂದರ್ಭದಲ್ಲಿ ನವಲೆ ಹಾಗೂ ಸೊಳಂಕಿಯವರ ಮನೆಗಳಲ್ಲಿ ಮೀಟರ್ ಬಡ್ಡಿ ನೀಡಿರುವದಕ್ಕೆ ಕೆಲವು ದಾಖಲೆಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ವಸಂತ , ಮಲಿಕಜಾನ ಹಾಗೂ ಸಾಲಗಾಂವ ಮಂಜುನಾಥ ಮನೆಗಳ ಮೇಲೆ ದಾಳಿ ನಡೆಸಿದಾಗ ಯಾವದೆ ದಾಖಲೆಗಳು ಸಿಕ್ಕಿಲ್ಲ.
ದಾಳಿಯ ಸಲುವಾಗಿ ಯಲ್ಲಾಪುರ ಠಾಣೆಯಿಂದ ಪಿಎಸೈ ಹಾಗೂ ಸಿಬ್ಬಂದಿಗಳನ್ನು ಕರೆಸಲಾಗಿತ್ತು. ದಾಳಿಯಲ್ಲಿ ಒಟ್ಟು ಮೂವತ್ತು ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಸಂಬಂಧ ಮಂಜುನಾಥ್ ನವಲೆ ಮತ್ತು ಕಿರಣ್ ಸೋಲಂಕಿ ಮೇಲೆ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಪಿಐ ಹಾಗೂ ಐದು ಪಿಎಸೈಗಳು ಸೇರಿದಂತೆ ಎಎಸ್‌ಐಗಳಾದ ದಯನಂದ ಮಡ್ಲಿ, ರಾಜೇಶ ನಾಯಕ್, ಗಂಗಾಧರ ಹೊಂಗಲ್, ಲೋಕೇಶ ಮೇಸ್ತಾ ಹಾಗೂ ಸಿಬ್ಬಂದಿಗಳಾದ ಗಣಪತಿ ಹುನ್ನಳ್ಳಿ, ಕಂಚಪ್ಪ ಮಾಲತೇಶ, ಸಂಜು ರಾಠೋಡ(ಲಮಾಣಿ), ನಾಗಪ್ಪ ಮುರಟಗಿ, ತಿರುಪತಿ ಚೌಡಣ್ಣವರ, ಅಣ್ಣಪ್ಪ ಹಾಗೂ ಕೋಟೇಶ ಸೇರಿದಂತೆ ಮುಂತಾದ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಮುಂಡಗೋಡು ಪೊಲೀಸ್ ಠಾಣೆಯಲ್ಲಿ (Mundgod Police Station) ಪ್ರಕರಣ ದಾಖಲಾಗಿದೆ.
ಮೀಟರ್ ಬಡ್ಡಿ ಕುಳಗಳ ಮೇಲೆ ದಾಳಿ ನಡೆಸಿದ ಸಿಪಿಐ ರಂಗನಾಥ ನಿಲಮ್ಮನವರ ಕಾರ್ಯವೈಖರಿಗೆ ತಾಲೂಕಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನು ಓದಿ : ಶಾಸಕ ಸತೀಶ್ ಸೈಲ್ ಗೆ ಏಳು ವರ್ಷ ಜೈಲು ಶಿಕ್ಷೆ.
ತಿರುಪತಿ ರೈಲನ್ನ ಗೋಕರ್ಣದವರೆಗೆ ವಿಸ್ತರಿಸಿ