ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital newsಶಿರಸಿ(Sirsi) : ತಾಲೂಕಿನ ಸಿದ್ದಾಪುರ ರಸ್ತೆಯಲ್ಲಿರುವ(Siddapur Road) ಅಜ್ಜೀಬಳ ಗ್ಯಾರೆಜ್ ಹತ್ತಿರ ಸೋಮವಾರ ಸಂಭವಿಸಿದ ಅಪಘಾತದಲ್ಲಿ (Accident) ಶಾಲಾ ವಿದ್ಯಾರ್ಥಿಯೋರ್ವ ಧಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಡವಾಗಿ ಗೊತ್ತಾಗಿದೆ
ತನ್ವಿಕ್ ರಾಘವೇಂದ್ರ ನಾಯ್ಕ(10) ಮೃತ ಬಾಲಕ. ಈತ ಅಜ್ಜಿಬಳ ಸರಕಾರಿ ಪ್ರಾಥಮಿಕ ಶಾಲೆಯ 4 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಶಿರಸಿ ಕಡೆಯಿಂದ ಸಿದ್ದಾಪುರದ(Sirsi to Siddapur) ಕಡೆಗೆ ಅತೀ ವೇಗವಾಗಿ ತೆರಳುತ್ತಿದ್ದ ಬೊಲೆರೋ ವಾಹನ ಮಿಸಗುಂದಿಯ ತನ್ವಿಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮೃತಪಟ್ಟಿದ್ದಾನೆ.
ಬೊಲೆರೋ ಚಾಲಕ ಕಾಗೇರಿ ಗ್ರಾಮದ ಕಿರಣ ಗಜಾನನ ನಾಯ್ಕ ಮೇಲೆ ಶಿರಸಿ ಗ್ರಾಮೀಣ ಠಾಣೆಯಲ್ಲಿ(Sirsi Rural Station) ಪ್ರಕರಣ ದಾಖಲಾಗಿದೆ. ಮಗನನ್ನ ಕಳೆದುಕೊಂಡ ಹೆತ್ತೊಡಲ ಆಕ್ರಂದನ ಮುಗಿಲು ಮುಟ್ಟಿದೆ.
ತನ್ವಿಕ್ ಅಂತ್ಯಕ್ರಿಯೆ ಮೃತನ ಹುಟ್ಟೂರಾದ ಮಿಸಗುಂದಿಯಲ್ಲಿ ನಡೆಯಿತು. ಶಾಲೆಯ ಮುಖ್ಯಾಧ್ಯಾಪಕರು ಸೇರಿದಂತೆ, ಶಿಕ್ಷಕ ವೃಂದ ಬಾಲಕನ ಮೃತದೇಹದ ಮುಂದೆ ಬಿಕ್ಕಿಬಿಕ್ಕಿ ಅತ್ತರು.
ಇದನ್ನು ಓದಿ : ಓವರ್ ಟೇಕ್ ಮಾಡಿದ ಕಾರು. ಅನಂತಕುಮಾರ ಚಾಲಕ, ಗನ್ ಮ್ಯಾನ್ ನಿಂದ ಡಿಶುಂ ಡಿಶುಂ.