ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಪುರಾಣ ಕ್ಷೇತ್ರ, ಇತಿಹಾಸ ಪ್ರಸಿದ್ಧವಾದ ಶ್ರೀ ಮುರ್ಡೇಶ್ವರ ದೇವಸ್ಥಾನದ (Murdeshwar Temple) ದರ್ಶನಕ್ಕೆ ಬರುವ ಭಕ್ತರು (Devotees) ಇನ್ಮುಂದೆ ಬೇಕಾಬಿಟ್ಟಿಯಾಗಿ ಬರುವಂತಿಲ್ಲ. ಹಿಂದು ಸಂಪ್ರದಾಯದಂತೆ ವಸ್ತ್ರ ಸಂಹಿತೆ(Dress Code) ನಿಯಮ ಪಾಲಿಸಿಯೇ ಬರಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಈ ಬಗ್ಗೆ ದೇವಾಲಯದ ಎದುರು ವಸ್ತ್ರಸಂಹಿತೆ(Dress Code) ಸಂಬಂಧಪಟ್ಟ ಜಾಗೃತಿ ಮೂಡಿಸುವ ಕಟೌಟ್ ಹಾಕಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ವಸ್ತ್ರಸಂಹಿತೆ ಪಾಲಿಸುವಂತೆ ವಿನಂತಿಸಲಾಗಿದೆ. ಮಹಿಳೆಯರು ಸೀರೆ, ಚೂಡಿದಾರ, ಪುರುಷರು, ಅಂಗಿ ಧೋತಿ, ಪ್ಯಾಂಟ್ ಶರ್ಟ್ ಮತ್ತು ಕುರ್ತಾ ಫೈಜಾಮ್ ಧರಿಸಿ ದೇವರ ದರ್ಶನ ಪಡೆಯಬಹುದೆಂದು ತಿಳಿಸಲಾಗಿದೆ.
ತಮಗಿಷ್ಟ ಬಂದಂತೆ ಅಸಭ್ಯ ಉಡುಪುಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ. ಮುರ್ಡೇಶ್ವರ ದೇವಸ್ಥಾನಕ್ಕೆ(Murdeshwar Temple) ಭೇಟಿ ನೀಡುವಾಗ ವಸ್ತ್ರ ಸಂಹಿತೆ ಪಾಲಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ದೇವಾಲಯ ಆಡಳಿತ ಮಂಡಳಿ ಸ್ಪಷ್ಟ ಸೂಚನೆಗಳನ್ನು ನೀಡಿದೆ. ದೇವಾಲಯದ ಪಾವಿತ್ರ್ಯತೆ ಮತ್ತು ಸಂಪ್ರದಾಯವನ್ನು ಕಾಪಾಡುವ ಸಲುವಾಗಿ ಈ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದೆಯೆಂದು ತಿಳಿಸಲಾಗಿದೆ.
ನಿಯಮಗಳನ್ನು ಉಲ್ಲಂಘಿಸಿ ಬಂದವರಿಗೆ ಯಾವುದೇ ಕಾರಣದಿಂದಲೂ ದೇವಾಲಯದ ಒಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಆದ್ದರಿಂದ, ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡುವವರು ವಸ್ತ್ರ ಸಂಹಿತೆ ಪಾಲಿಸಬೇಕಾಗಿದೆ.
ಇದನ್ನು ಓದಿ : ಶಾಲೆ ವಿಷಯಕ್ಕೆ ರಾಜಕಾರಣ. ಎಸ್ಡಿಎಂಸಿ ಸದಸ್ಯರ ಸಾಮೂಹಿಕ ರಾಜೀನಾಮೆ.