ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) :  ಗೇರುಸೊಪ್ಪ ಸೂಳೆಮೂರ್ಕಿ ಕ್ರಾಸ್(Gerusoppa Soolemurki cross) ಬಳಿ ಸಾರಿಗೆ ಬಸ್ ಹಾಗೂ ಕಾರು(Bus and Car) ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಸಾವನ್ನಪ್ಪಿ 15ಕ್ಕೂ ಹೆಚ್ವು ಮಂದಿ ಗಾಯಗೊಂಡಿದ್ದಾರೆ

ಅಪಘಾತದ ಪರಿಣಾಮವಾಗಿ ಬಸ್ ಕಂದಕಕ್ಕೆ ಪಲ್ಟಿಯಾಗಿ ಬಿದ್ದಿದೆ. ಸರ್ಕಾರಿ ಬಸ್ ಬೆಂಗಳೂರಿನಿಂದ ಭಟ್ಕಳಕ್ಕೆ(Bangalore to Car) ಬರುತ್ತಿದ್ದಾಗ ಸೂಳೆಮೂರ್ಕಿ ತಿರುವಿನಲ್ಲಿ ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಬಸ್‌ ಪಲ್ಟಿಯಾದ(Bus Overturned) ಪರಿಣಾಮವಾಗಿ  ಪ್ರಯಾಣಿಕರು  ಗಂಭೀರವಾಗಿ ಗಾಯಗೊಂಡಿದ್ದಾರೆ.  ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಐದಕ್ಕೂ ಹೆಚ್ಚು ಅಂಬ್ಯುಲೆನ್ಸ್  ತೆರಳಿ ಗಾಯಾಳಗಳನ್ನ ಹೊನ್ನಾವರ ಸರಕಾರಿ ಆಸ್ಪತ್ರೆಗೆ(Honnavar Government Hospital) ಕರೆತರಲಾಗಿದೆ.

ಸರ್ಕಾರಿ ಬಸ್‌ನಲ್ಲಿ 30ಕ್ಕೂ ಹೆಚ್ಚಿನ ಪ್ರಯಾಣಿಕರಿದ್ದಾಗಿ ತಿಳಿದುಬಂದಿದ್ದು ಅಪಘಾತವಾಗಿದ್ದರಿಂದ  ಮಾರ್ಗದಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಹೊನ್ನಾವರ ಪೊಲೀಸರು(Honnavar Police),  ಅಗ್ನಿಶಾಮಕ ಸಿಬ್ಬಂದಿಗಳು(Fire Brigade) ಕೂಡ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನೊಂದಿಗೆ ಬಸ್ ನಲ್ಲಿದ್ದವರನ್ನ ಹೊರ ತೆಗೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ(Mankal Vaidya) ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನು ಓದಿ : ನಮ್ಮ ಕುಟುಂಬದ ತೀರ್ಮಾನವೇ ಅಂತಿಮ. ಬದಲಾವಣೆಯ ತೀರ್ಮಾನವೇ ಅವರಿಂದಲೇ : ಸಚಿವ ಮಂಕಾಳ ವೈದ್ಯ.

ಎಂಇಎಸ್ ಮುಖಂಡರ ಜೊತೆ ಪೊಲೀಸ್ ಅಧಿಕಾರಿ ಸೆಲ್ಫಿ. ಕನ್ನಡಿಗರ ಆಕ್ರೋಶ.

ಕಾರ್ತಿಕ ಏಕಾದಶಿಗೆ ಆಗಮಿಸಿದ ಭಕ್ತರು. ದೇವರ ದರ್ಶನಕ್ಕೆ ತೆರಳುವಾಗ ಕಾಲ್ತುಳಿತ. ಹತ್ತು ಭಕ್ತರ ದುರ್ಮರಣ.

ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ತಪ್ಪಿದ ಅನಾಹುತ.