ಮಂಗಳೂರು : ಮನೆಯವರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಚಡ್ಡಿ ಗ್ಯಾಂಗ್ (ಚಡ್ಡಿ ಗ್ಯಾಂಗ್) ಸದಸ್ಯರ ಮೇಲೆ ಪೊಲೀಸರು ಶೂಟ್ ಔಟ್ (shutout) ನಡೆಸಿದ ಘಟನೆ ಬೆಳಿಗ್ಗೆ ನಡೆದಿದೆ.
ಪೊಲೀಸರಿಂದ ತಪ್ಪಿಸಿ ಪರಾರಿಯಾಗಲು ಯತ್ನಿಸಿದ ಸಂದರ್ಭ ಪೊಲೀಸರು ತಮ್ಮ ಬಲ ಪ್ರಯೋಗಿಸಿದ್ದಾರೆ.
ಮಂಗಳೂರಿನ ಪಡುಪಣಂಬೂರು (padupanamburu) ಎಂಬಲ್ಲಿ ಘಟನೆ ನಡೆದಿದೆ. ನಿನ್ನೆ ಮಂಗಳೂರು ನಗರದಲ್ಲಿ ಮನೆಯಿಂದರಲ್ಲಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಚಡ್ಡಿ ಗ್ಯಾಂಗ್ ನ ನಾಲ್ವರನ್ನ ಪೊಲೀಸರು ಮಂಗಳೂರು (MANGLORE) ಮತ್ತು ಸಕಲೇಶಪುರ (SAKALESHAPURA) ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
ಇಂದು ಬೆಳಿಗ್ಗೆ ಮುಲ್ಕಿ (MULKI) ಸಮೀಪ ಮಹಜರಿಗೆ ತೆರಳಿದ ಸಂದರ್ಭ ಚಡ್ಡಿಗ್ಯಾಂಗ್ ನ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಓರ್ವ ಎಎಸ್ಐ ಮತ್ತು ಇಬ್ಬರು ಪೋಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು. ಹೀಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಕಾಲಿಗೆ ಗುಂಡು ತಗುಲಿದೆ.
ತಕ್ಷಣ ಗಾಯಗೊಂಡ ಇಬ್ಬರನ್ನೂ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.