ಜೋಯಿಡಾ(Joida) : ಅಪ್ರಾಪ್ತ ಬಾಲಕನಿಗೆ ಚಲಾಯಿಸಲು ವಾಹನ ನೀಡಿದ ವ್ಯಕ್ತಿಗೆ ನ್ಯಾಯಾಲಯ ಬರೋಬ್ಬರಿ ದಂಡ ವಿಧಿಸಿದೆ.

ರಾಮನಗರ ಪೊಲೀಸ್ ಠಾಣಾ(Ramanagar Police Station) ವ್ಯಾಪ್ತಿಯಲ್ಲಿ ವಾಹನ ಮಾಲೀಕರಾದ ದಿಲೀಪ ದಶರಥ ದೇಸಾಯಿ ಎಂಬುವವರು ಅಪ್ರಾಪ್ತ ಬಾಲಕನಿಗೆ ದ್ವಿ-ಚಕ್ರ ವಾಹನ ಚಲಾಯಿಸಲು ನೀಡಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು.

ದಾಂಡೇಲಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಪ್.ಸಿ ನ್ಯಾಯಾಲಯವು ವಾಹನದ ಮಾಲೀಕನಿಗೆ 25,000 ಸಾವಿರ ರೂಪಾಯಿ ದಂಡ(Fine) ವಿಧಿಸಿ ಆದೇಶಿಸಿದೆ. ಬೈಕ್ ಮಾಲೀಕರು (Bike Owner) ದಂಡವನ್ನು ನ್ಯಾಯಾಲಯಕ್ಕೆ ಭರಣ ಮಾಡಿದ್ದಾರೆ.

ಅಪ್ರಾಪ್ತರು, ಮಕ್ಕಳಿಗೆ (Minor)ವಾಹನ ನೀಡುವವರಿಗೆ ಇದು ಎಚ್ಚರಿಕೆ (Warning) ಗಂಟೆಯಾಗಿದೆ. ದಂಡದ ಹಣ ನಿಮ್ಮಲ್ಲೇ ಉಳಿಯಬೇಕಾದಲ್ಲಿ ವಾಹನ ನೀಡುವ ಉಸಾಬರಿಗೆ ಹೋಗಬೇಡಿ.

ಇದನ್ನು ಓದಿ : ಕಾಡು ಕುರಿ ಮಾಂಸ ಹಂಚಲು ಹೊರಟಿದ್ದ ಇಬ್ಬರ ಬಂಧನ

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಘೋಷಣೆ

ಮನೆ ಮುಂದಿನ ಕಾಡಿನಲ್ಲಿ ಮಹಿಳೆ ಶವ ಪತ್ತೆ

ದಾಂಡೇಲಿ ಬಸ್ ನಲ್ಲಿ ಹೃದಯಘಾತ.