ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66(NH 66) ರಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕು ಸಂಭವಿಸಿದೆ.
ಅರಗಾ ರಾ. ಹೆದ್ದಾರಿ 66 ರ ಕೋಸ್ಟ್ ಗಾರ್ಡ್ ಕಚೇರಿಯ(Coast Guard Office) ಎದುರು ರಾತ್ರಿ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರರಿಗೆ ಗಂಭೀರ ಗಾಯವಾಗಿದೆ. ಬೈಕ್ ಸವಾರ ಆನಂದ ಎಸ್.ಆರ್ ಎಂಬಾತನು ಬೈಕ್ ತಿರುಗಿಸುತ್ತಿದ್ದ ವೇಳೆ ಅಂಕೋಲಾ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಹಾಗೂ ಹಿಂಬದಿ ಕುಳಿತಿದ್ದ ಬಾಲಕಿಯ ತಲೆ, ಮುಖ, ಕೈ ಹಾಗೂ ಕಾಲುಗಳಿಗೆ ಗಂಭೀರ ಪೆಟ್ಟಾಗಿದೆ. ಸ್ಥಳೀಯರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ(District Hospital) ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಇನ್ನೊಂದು ಘಟನೆ ತೋಡೂರಿನ ಗ್ರಾಮ ಪಂಚಾಯಿತಿ(Toduru Grama Panchayat) ಕಚೇರಿಯ ಎದುರು ಬೆಳಗ್ಗೆ ನಡೆದಿದೆ. ಸ್ಕೂಟಿವೊಂದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಸ್ಕೂಟಿಯನ್ನು ತಿರುಗಿಸುತ್ತಿದ್ದ ವೇಳೆ ಅಂಕೋಲಾ ಕಡೆಯಿಂದ ಕಾರವಾರಕ್ಕೆ(Ankola to Karwar) ಬರುತ್ತಿದ್ದ ವೇಳೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಸ್ಕೂಟಿ ಹಾಗೂ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Karwar Police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ತರುಣಿ ಆತ್ಮಹತ್ಯೆಯ ಹಿಂದೆ ಪ್ರೇಮ ಪ್ರಕರಣದ ತಳುಕು. ಗ್ರಾಮಸ್ಥರ ಸಂಶಯ.
ಖಾಸಗಿ ಬಸ್ ನಲ್ಲಿ ಕೋಟಿ ರೂ. ಹಣ ಪತ್ತೆ. ಕಾರವಾರದಲ್ಲಿ ಇಬ್ಬರ ಬಂಧನ.
ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ. ನಿಯಮ ಉಲ್ಲಂಘಿಸಿದವರ ಲೈಸೆನ್ಸ್ ರದ್ದು
ಹೆದ್ದಾರಿಯಲ್ಲಿ ಪಲ್ಟಿಯಾದ ಸೇಬು ಹಣ್ಣಿನ ಲಾರಿ. ರಸ್ತೆ ಸಂಚಾರಕ್ಕೆ ಕೆಲ ಕಾಲ ತಡೆ.

