ಮಂಗಳೂರು(MANGLORE) : ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ಗಳ ನಿರ್ವಾಹಕರು ನಡು ರಸ್ತೆಯಲ್ಲಿ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಮಂಗಳೂರಿನಿಂದ ತಲಪಾಡಿ(TALPADI) ಸಂಚರಿಸುವ ಖಾಸಗಿ ಬಸ್ಗಳ ನಡುವಿನ ಸಂಘರ್ಷ ಜೋರಾಗಿದೆ. ರಸ್ತೆ ಮಧ್ಯೆದಲ್ಲಿಯೇ ತಮ್ಮ ಬಸ್ಗಳನ್ನ ನಿಲ್ಲಿಸಿದ ಇಬ್ಬರು ಕಂಡಕ್ಟರ್ ಗಳು ಹಿಗ್ಗಾಮುಗ್ಗಾ ಬಡಿದಾಡಿಕೊಂಡಿದ್ದಾರೆ. ಮತ್ತೊರ್ವ ಕಂಡಕ್ಟರ್ ಬಂದು ಇಬ್ಬರನ್ನೂ ಬಿಡಿಸಿದ್ದಾನೆ. ಪ್ರಯಾಣಿಕರ ಎದುರೇ ಈ ರೀತಿ ನಿರ್ವಾಹಕರು(CONDUCTORS) ಹೊಡೆದಾಡಿಕೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಮಂಗಳೂರಿಗರು ಹೇಳಿದ್ದಾರೆ .
ಎದುರುಗಡೆಯ ವಾಹನವೊಂದರಲ್ಲಿದ್ದ ಪ್ರಯಾಣಿಕ ತಮ್ಮ ಮೋಬೈಲಲ್ಲಿ ಮಾರಾಮಾರಿಯ ವಿಡಿಯೋ ರೆಕಾರ್ಡ್(VIDEO RECORD) ಮಾಡಿಕೊಂಡಿದ್ದು ಸಾಮಾಜಿಕ ತಾಣಗಳಲ್ಲಿ ಸದ್ಯ ಕಂಡಕ್ಟರ್ ಗಳ ಫೈಟಿಂಗ್ ಆ ವಿಡಿಯೋ ವೈರಲ್ ಆಗುತ್ತಿದೆ .
ಇದನ್ನು ಓದಿ : ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಕಟ್ಟುನಿಟ್ಟಿನ ಸೂಚನೆ
ಉತ್ತರಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಕುಮಾರಸ್ವಾಮಿಗೆ ಮನವಿ