ಅಂಕೋಲಾ(ANKOLA) :  ಕಾಡು ಹಂದಿ ಮಾಂಸ ಒಯ್ಯುತ್ತಿದ್ದ ವ್ಯಕ್ತಿಯೋರ್ವನನ್ನು  ಬಂಧಿಸಿದ ಘಟನೆ  ತಾಲೂಕಿನ ಬಾಳೆಗುಳಿ ಕ್ರಾಸ್ ಬಳಿ ನಡೆದಿದೆ.

ಸುಂಕಸಾಳ ಮೂಲದ ಅಕ್ಷಯ ಮಂಜುನಾಥ್ ಗಾಂವ್ಕರ್ (30) ಬಂಧಿತನಾಗಿದ್ದಾನೆ. ಬಂಧಿತನಿಂದ 29 ಕೆಜಿ ಕಾಡು ಹಂದಿಯ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿ 63 ರ ಸುಂಕಸಾಳದಿಂದ ಕಾರಿನಲ್ಲಿ ಮಾಂಸ ಸಾಗಿಸುತ್ತಿದ್ದ.  ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ತಂಡ ಬಾಳೆಗುಳಿ ಕ್ರಾಸ್ ಬಳಿ ಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಕಾರಿನಲ್ಲಿ ಕಾಡು ಹಂದಿಯ ಮಾಂಸ ಇರುವುದು ಪತ್ತೆಯಾಗಿದೆ.

ಒಂದು ಕೆಜಿಯಂತೆ 29 ಪ್ಯಾಕೇಟ್ ಗಳನ್ನ ಮಾಡಿ ಇರಿಸಲಾಗಿತ್ತು.   ವನ್ಯಜೀವಿ (WILD) ಸಂರಕ್ಷಣಾ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.  ಬಂಧಿತನನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು  15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಡಿ ಎಫ್ ಓ ರವಿಶಂಕರ್ ಮಾರ್ಗದರ್ಶನದಲ್ಲಿ, ಎ ಸಿ ಎಫ್ ಕೃಷ್ಣ  ಗೌಡ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಪ್ರಮೋದ ನಾಯಕ, ಉಪವಲಯ ಅರಣ್ಯಾಧಿಕಾರಿಗಳಾದ ಜಗದೀಶ ದೇವಾಡಿಗ, ಭರತೇಶ್ ವಾಲ್ಮೀಕಿ, ರಾಮಕೃಷ್ಣ ನಾಯ್ಕ, ಗಸ್ತು ಅರಣ್ಯ ಪಾಲಕರಾದ ಮಂಜುನಾಥ್ ನಾಯ್ಕ, ಯಮುನಪ್ಪ ಹಾಗೂ ವಾಹನ ಚಾಲಕರಾದ ಶ್ರೀನಿವಾಸ ಆಗೇರ, ಜಗದೀಶ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.