ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಚಿತ್ರದುರ್ಗ(Chitradurga) : ಐವರ ಮೇಲೆ ಆ್ಯಸಿಡ್ ದಾಳಿ(Acid Attack) ಹಾಗೂ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗದ ಮಾಳಪ್ಪನಹಟ್ಟಿ(Chitradurga Malappanahatti) ಗ್ರಾಮದಲ್ಲಿ ನಡೆದಿದೆ.


ತಾಸಿನಾ ಬಾನು ಎಂಬವರ ಮೇಲೆ ಅವರ ಮಾಜಿ ಪತಿ ಸುಹೇಲ್ ಭಾಷಾ ದಾಳಿ ನಡೆಸಿದ ಆರೋಪ ಕೇಳಿಬಂದಿದೆ. ಕೆಲ ತಿಂಗಳ ಹಿಂದೆ ಪತಿ ಕಿರುಕುಳದಿಂದ ಬೇಸತ್ತು ತಾಸಿನಾ ಬಾನು ಸಂಬಂಧ ಕಡಿದುಕೊಂಡು ಬೆಂಗಳೂರಿಗೆ ತೆರಳಿದ್ದರು. ಹಬ್ಬದ ನಿಮಿತ್ತ ಸಹೋದರಿ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಸಹೋದರಿ ನಗ್ಮಾ ನಾಯ್ಕ್ ಅವರ ಮನೆಯಲ್ಲಿ ತಾಸಿನಾ ಬಾನು ಇದ್ದಾಗ ಆರೋಪಿ ಮನೆಗೆ ನುಗ್ಗಿ ಮೊದಲು ಮಚ್ಚಿನಿಂದ ತಾಸಿನಾ ಬಾನು ಮೇಲೆ ಹಲ್ಲೆ(Assault) ನಡೆಸಿದ್ದಾನೆ. ನಂತರ ಮನೆಯಲ್ಲಿದ್ದವರ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ದಾಳಿಯಲ್ಲಿ ತಾಸಿನಾ ಬಾನು, ಅವರ ಪುತ್ರಿ ರೋಷನಿ, ಸಹೋದರಿ ನೇಹಾ, ನೇಹಾ ಪುತ್ರಿ ಇಕ್ರಾ ಹಾಗೂ ಹಿರಿಯ ಸಹೋದರಿ ನಗ್ಮಾ ನಾಯ್ಕ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಸಿನಾ ಬಾನು ಮತ್ತು ಸುಹೇಲ್ ಭಾಷಾ ಪ್ರೇಮ ವಿವಾಹವಾಗಿದ್ದು(Love Marriage), ಇತ್ತೀಚೆಗೆ ಇಬ್ಬರೂ ಬೇರ್ಪಟ್ಟಿದ್ದರು. ಸಂಬಂಧ ಕಡಿದುಕೊಂಡಿದ್ದಕ್ಕೆ ಕೋಪಗೊಂಡು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಸುಹೇಲ್ ಭಾಷಾ ಚಿತ್ರದುರ್ಗದ ನೆಹರು ನಗರದ(Chitradurga Nehrunagar) ನಿವಾಸಿಯಾಗಿದ್ದು, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ.
ಘಟನೆ ಕೋಟೆ ಪೊಲೀಸ್ ಠಾಣೆ(Kote Police Station) ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಕೃತ್ಯ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಇದನ್ನು ಓದಿ : ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಿರ್ದೇಶಕ ಸ್ಥಾನಕ್ಕೆ ವಿಠ್ಠಲ ದೈಮನೆ ನಾಮಪತ್ರ ಸಲ್ಲಿಕೆ.
