ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಮಲ್ಲಿಕಾರ್ಜುನ ಟೈಲ್ಸ್ , ಸಿರಾಮಿಕ್ಸ್ ಅಂಗಡಿ ಮಾಲೀಕರೊಬ್ಬರ ಮೈಮೇಲೆ ಗ್ರಾನೈಟ್ ಬಿದ್ದು ಸಾವನ್ನಪ್ಪಿದ(Death) ಘಟನೆ ನಡೆದಿದೆ.

ಸದಾಶಿವಗಡದ ಬಿಡ್ತುಲಬಾಗ ಎಂಬಲ್ಲಿ ಈ ಅವಘಡ ಸಂಭವಿಸಿದ್ದು, ಉದ್ಯಮಿ ಮುದ್ದಣ್ಣ ಹನಮಪ್ಪ ಹಾಲುಂಡಿ (49) ಮೃತ ದುರ್ದೈವಿಯಾಗಿದ್ದಾರೆ.

ಕೆಲಸದ ಕಾರ್ಮಿಕರು ಬಾರದ ಕಾರಣಕ್ಕೆ ಮುದ್ದಣ್ಣ ಕೆಲಸ ಮಾಡಲು ಮುಂದಾಗಿದ್ದರು. ಗ್ರಾನೈಟ್(Granite) ಕಲ್ಲಿಗೆ ಅವರು ಕೈಕೊಟ್ಟು ನಿಂತಿದ್ದ ವೇಳೆ , ನೆಲ ಒದ್ದೆಯಾಗಿದ್ದ ಕಾರಣ ಕಲ್ಲು ಜಾರಿ ಅವರ ಮುಖ ಭಾಗಕ್ಕೆ ಬಿತ್ತು ಎನ್ನಲಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ತರಲಾಯಿತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದಾರೆನ್ನಲಾಗಿದೆ.

ಕಾರವಾರ(Karwar) ತಾಲೂಕು ಉಪ್ಪಾರ ಸಮುದಾಯದ ಹಿರಿಯ ಮುಖಂಡರು ಹಾಗೂ ಉಪ್ಪಾರ ಸಮಾಜದ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು. ಆಕಸ್ಮಿಕ ಸಾವು ಅವರ ಅಪ್ತರಲ್ಲಿ, ಕುಟುಂಬ ವರ್ಗದವರಲ್ಲಿ ಅತೀವ ದುಃಖ ತಂದಿದೆ. ಮುದ್ದಣ್ಣ ಮೂಲತಃ ಬಾಗಲಕೋಟಿ ಜಿಲ್ಲೆಯ(Bagalakote native) ನಿಲೋಗಲ್ಲ ಗ್ರಾಮದವರಾದ ಅವರು  ಟೈಲ್ಸ್ ಉದ್ಯಮಿಯಾಗಿ ಅವರು ಕಾರವಾರದಲ್ಲಿ ನೆಲೆಸಿದ್ದರು.

ಇದನ್ನು ಓದಿ : ವಿದ್ಯುತ್ ಶಾಖ್ ನಿಂದ ಹೆಣ್ಣು ಕಾಡಾನೆ ಸಾವು, ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ

ರಷ್ಯಾ ಯೋಧನಿಗೆ ಗೋಕರ್ಣದಲ್ಲಿ ಮೋಕ್ಷ ಕಾರ್ಯ.