ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಸಿದ್ದಾಪುರ(Siddapur) : ಉತ್ತರಕನ್ನಡ(Uttarakannada) ಮತ್ತು ಶಿವಮೊಗ್ಗ(Shivamogga) ಜಿಲ್ಲೆಯಲ್ಲಿ ಯುವಕನೋರ್ವನ ಆತ್ಮಹತ್ಯೆ ಪ್ರಕರಣ  ಸಾಕಷ್ಟು ಚರ್ಚೆಯಾಗುತ್ತಿದೆ. ಯುವತಿಯರನ್ನ ಪ್ರೀತಿಸುವ ನಾಟಕವಾಡುವ ಯುವಕರ ತಂಡವೊಂದರ ಕೃತ್ಯ ಬಯಲಿಗೆಳೆದ ತಂಡದ ಕೆಲವರನ್ಮು ಪೊಲೀಸರು ಬಂಧಿಸಿದ್ದು ಪ್ರಕರಣದಲ್ಲಿ ಇನ್ನೂ ಹಲವರು ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಸಿದ್ದಾಪುರದಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಯುವಕ ಮಾಡಿದ  ಆಡಿಯೋವೊಂದನ್ನ ಬಾರೀ  ಚರ್ಚೆ ನಡೆಯುತ್ತಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ(Soraba) ತಾಲೂಕಿನ ಬೆನ್ನೂರು ಚಿಕ್ಕತ್ಡತ್ತಿ ನಿವಾಸಿಯಾಗಿರುವ ಸಂತೋಷ್ ಗಣಪತಿ ನಾಯ್ಕ (26) ಆತ್ಮಹತ್ಯೆ ಮಾಡಿಕೊಂಡಿದ್ದ. ಸಂತೋಷ್ ಸಾವಿಗೆ ಶರಣಾಗುವ ಮುನ್ನ ಯುವತಿಯರ ದುರ್ಬಳಕೆ ಮಾಡೋ ಜಾಲದ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ಜಾಲದ ಬಗ್ಗೆ ಅಡಿಯೋ ಹಾಗೂ ಫೋಟೋ ಎಡಿಟ್ ಮಾಡಿದ  ವಿಡಿಯೋ ಹರಿಬಿಟ್ಟಿದ್ದ. ಅಲ್ಲದೇ ಸಿದ್ದಾಪುರದ ಕಾಂಗ್ರೆಸ್ ನಾಯಕರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾನೆ.

ಯುವತಿಯರ ಸೆಕ್ಸ್ ವಂಚನೆಯ (Sex Cheating) ಜಾಲವನ್ನು ಬಯಲಿಗೆಳೆದ ಸಂತೋಷ್ ನಾಯ್ಕ ಅವರಿಗೆ ತಂಡವೊಂದು ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿತ್ತು. ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ(Siddapur Police Station) ಪ್ರಕರಣದ ದಾಖಲಾಗಿತ್ತು. ಪ್ರಕರಣ ಸಂಬಂಧ  ಸಿದ್ದಾಪುರ ತಾಲೂಕಿನ ಚನಮಾಂವದ ಚರಣ್, ಲೋಕೇಶ್, ಮನೋಜ್ ಅವರನ್ನ ಬಂಧಿಸಲಾಗಿದೆ. ಇನ್ನೂ  ನಾಲ್ಕೈದು  ಜನರಿರುವ ಬಗ್ಗೆ ದೂರಿನಲ್ಲಿ  ತಿಳಿಸಲಾಗಿತ್ತು.

ಪ್ರಕರಣದಲ್ಲಿ  ಭಯಗೊಂಡಿದ್ದ  ಸಂತೋಷ್, ಸಿದ್ದಾಪುರ ತಾಲೂಕಿನ ಕಾನಹಳ್ಳಿ ಬಳಿ ದೂಪನಕಾನು ಅರಣ್ಯದಲ್ಲಿ ಆಕೇಶಿಯಾ ಮರಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.

ಸಂತೋಷ ಫೇಸ್‌ಬುಕ್‌ನಲ್ಲಿ(Facenook) ಯುವತಿಯ ಹೆಸರಿನಲ್ಲಿ ಫೇಕ್ ಪ್ರೊಫೈಲ್(Fake Profile) ಮಾಡಿ ಜಾಲವನ್ನ ತನ್ನ ಬಲೆಗೆ ಬೀಳಿಸಿದ್ದ. ಹುಡುಗಿಯಂತೆ ಮಾತನಾಡಿ, ಅವರಿಂದ ಮಾಹಿತಿ ಪಡೆದು ಒಂದಷ್ಟು ಹಣ ಕೂಡಾ ಪಡೆದಿದ್ದ, ಆದರೆ, ಫೇಕ್ ಪ್ರೊಫೈಲ್ ಹುಡುಗಿಯದ್ದಲ್ಲ ಸಂತೋಷನದ್ದು ಎಂದು ತಿಳಿದ ಬಳಿಕ ಆತನಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಮನೆಗೆ ತೆರಳಿ ಗಲಾಟೆ ಮಾಡಿ ಆತನ ಟ್ಯಾಬ್‌ಗಳನ್ನು ಕೂಡಾ ತೆಗೆದುಕೊಂಡು ಹೋಗಿದ್ದಾರೆ ಎಂದು ಆತ ಅಡಿಯೋದಲ್ಲಿ ಸಾವಿಗೂ ಮುನ್ನ ಸಂತೋಷ ಹೇಳಿಕೊಂಡಿದ್ದಾನೆ.

ಮೋಸದ ಜಾಲದಲ್ಲಿ ತಾನು ಪ್ರೀತಿಸಿದ ಯುವತಿ ಇದ್ದುದರಿಂದ  ಜಾಗೃತಿ ಮಾಡಬೇಕಾಗಿತ್ತು ಎಂದು  ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಜಾಲದ ಬಗ್ಗೆ ಆಡಿಯೋ ಹಾಗೂ ಫೋಟೋ ಎಡಿಟ್‌ ಮಾಡಿ ಹಂಚಿಕೊಂಡಿದ್ದಾನೆ. ಅಲ್ಲದೇ, ಸಿದ್ದಾಪುರದ ಕಾಂಗ್ರೆಸ್ ನಾಯಕರ ಬಗ್ಗೆಯೂ ಆರೋಪ ಮಾಡಿದ್ದ. ಎಲ್ಲವನ್ನ ಪರಿಶೀಲನೆ ನಡೆಸಿದ ಸಿದ್ದಾಪುರ‌ ಪೊಲೀಸರು  ಮುಖಂಡನನ್ನ  ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ : ಯುವತಿ ಮೊಬೈಲ್ ಎಗರಿಸಿದ ಮಂಗ. ಕಪಿಚೇಷ್ಠೆ ನೋಡಲು ಜನವೋ ಜನ.

ಮಹಿಳೆಯರಲ್ಲಿ ಸಂತಾನೋತ್ಪತ್ತಿ ಪ್ರಮಾಣ ಕುಸಿತ. ಈ ವರ್ಷದಂಚಿಗೆ ಜನಸಂಖ್ಯೆ 140 ಕುಸಿತ ಸಾಧ್ಯತೆ.