ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಅಂಕೋಲಾ(Ankola) :  ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ(Congress Leader Gopalkrishna Nayak) ಅವರ ಮೇಲೆ ನಡೆದಿದ್ದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಬೀದಿಯಲ್ಲಿ  ನಡೆದು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.

ಘಟನೆಯ ನಂತರ ಆರೋಪಿಗಳು ಬಳಸಿದ್ದ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಬಳಿಕ ಕಾರವಾರದ ಮಾಜಾಳಿ ಗಡಿ ಚೆಕ್‌ಪೋಸ್ಟ್‌ನಲ್ಲಿ(Majali Checkpost) ವಿಶೇಷ ತಪಾಸಣೆ ನಡೆಸಿದ ವೇಳೆ ನಾಲ್ವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು  ಮೂಲಗಳು ತಿಳಿಸಿವೆ.

ಘಟನೆ ಬಳಿಕ ಆರೋಪಿಗಳು ಅಂಕೋಲಾ ಪಟ್ಟಣದ(Ankola Town) ಪೂರ್ಣ ಪ್ರಜ್ಞಾ ಶಿಕ್ಷಣ ಸಂಸ್ಥೆ(Poornaprajna Education Organization) ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ(CC Camera) ಸೆರೆಗೊಂಡಿವೆ. ಕಾರು ಬಿಟ್ಟು ಕಾಲ್ನಡಿಗೆಯಲ್ಲೇ ಪರಾರಿಯಾಗಿರುವುದು ದೃಶ್ಯಗಳಿಂದ ಸ್ಪಷ್ಟವಾಗಿದೆ.

ಕೊಲೆ ಯತ್ನ ವಿಫಲವಾದ ಬಗ್ಗೆ ಒಬ್ಬ ವ್ಯಕ್ತಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಆರೋಪಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯವೂ ದಾಖಲಾಗಿದೆ. “ಕೆಲಸ ಪೂರ್ತಿ ಮಾಡದೇ ಇದ್ದರೆ ಯಾಕೆ ಬಂದಿದ್ದೀರಿ?” ಎಂದು ಪ್ರಶ್ನಿಸುವುದರ ಜೊತೆಗೆ, “ಅರೆಬರೆ ಕೆಲಸ ಮಾಡಿ ಪರಾರಿಯಾಗುತ್ತೀರಾ?” ಎಂದು ಗದರಿಸುತ್ತಿರುವುದು ಕೇಳಿಬರುತ್ತಿದೆ.

ಈ ಘಟನೆ ಅಂಕೋಲಾ ಪಟ್ಟಣದಲ್ಲಿ(Ankola Town) ಆತಂಕ ಸೃಷ್ಟಿಸಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ತನಿಖೆ(Police Investigation) ಮುಂದುವರಿಸಿದ್ದಾರೆ.

ಇದನ್ನು ಓದಿ : ಕಾಂಗ್ರೆಸ್ ಮುಖಂಡನ ಹತ್ಯೆಗೆ ಯತ್ನ ಕೇಸ್. ಎಸ್ಕೇಪ್ ಆದ ದುಷ್ಕರ್ಮಿಗಳು ಲಾಕ್.

ಗೃಹ ಸಚಿವರ ಆಪ್ತ, ಕಾಂಗ್ರೆಸ್ ಮುಖಂಡ ಅಂಕೋಲಾದ ಗೋಪಾಲಕೃಷ್ಣ ‌ನಾಯಕ ಹತ್ಯೆಗೆ ಯತ್ನ.

ಸಚಿನ್ ಮೆಮೋರಿಯಲ್ ಟ್ರೋಫಿ: ಗೋಲ್ಡನ್ ಸ್ಟಾರ್ ಚಾಂಪಿಯನ್