ಮುಂಡಗೋಡ(Mundgodu) : ಪಟ್ಟಣದ ಶಿವಾಜಿ ವೃತ್ತದಲ್ಲಿ(Shivaji Circle) ಮಂಗಳಮುಖಿಯರು ಗೂಂಡಾಗಿರಿ ನಡೆಸಿ ರಂಪಾಟ ಮಾಡಿದ ಘಟನೆ ಶನಿವಾರ ನಡೆದಿದೆ.
ಹಣ ಕೊಡದಕ್ಕೆ ಅಂಗಡಿ ಪುಡಿಗೈದು, ಮಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ಅಂಗಡಿ ಮಾಲಕ ಹಾಗೂ ಪುಟ್ಟ ಮಗುವಿಗೆ ಗಾಯವಾಗಿದೆ. ಹುಬ್ಬಳ್ಳಿಯಿಂದ (Hubli) ಬಂದಿದ್ದ ಆರು ಮಂದಿ ಮಂಗಳಮುಖಿಯರ ತಂಡ ಇಲ್ಲಿನ ರಾಜೇಶ್ ಎಂಬುವವರ ಅಂಗಡಿಗೆ ನುಗ್ಗಿ 100ರೂ. ಕೊಡುವಂತೆ ಒತ್ತಾಯಿಸಿದೆ. ಹಣ ಕೊಡಲು ನಿರಾಕರಿಸಿದಾಗ ರಾಜೇಶ್ ಮೇಲೆ ಹಲ್ಲೆ ನಡೆಸಿ, ಗ್ಲಾಸ್ ಒಡೆದು, ಚಾಕ್‌ಲೇಟ್ ಬಾಕ್ಸ್ ಬಿಸಾಕಿ ರಂಪಾಟ ಮಾಡಿದೆ.
ಅಂಗಡಿ ಮಾಲಕನ ಮೇಲೆ ಹಲ್ಲೆ ನಡೆಸುವಾಗ ಅವರ ಪುಟ್ಟ ಮಗುವಿನ ತಲೆಗೂ ಗಾಯವಾಗಿದೆ. ಮಂಗಳಮುಖಿಯರ ದೌರ್ಜನ್ಯ ಖಂಡಿಸಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಮುಂಡಗೋಡು ಪೊಲೀಸರು(Mundgod Police) ಮಂಗಳಮುಖಿಯರನ್ನು ವಶಕ್ಕೆ ಪಡೆದಿದ್ದಾರೆ.
ಗಾಯಗೊಂಡ ಮಗುವಿನೊಂದಿಗೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು ಮಂಗಳಮುಖಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಇದನ್ನು ಓದಿ : ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯ ಏಸಗಿದ ವ್ಯಕ್ತಿಗೆ ಶಿಕ್ಷೆ