ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ(Karwar):ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಪಡಿತರ ಚೀಟಿದಾರರಿಗೆ ಹಾಗೂ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಅಕ್ಟೋಬರ್ 20 ರೊಳಗೆ ತಮ್ಮ ಇ-ಕೆವೈಸಿ(ekyc) ಮಾಡಿಸಿಕೊಳ್ಳಬೇಕೆಂದು ಆಹಾರ ಇಲಾಖೆ(Food Department) ತಿಳಿಸಿದೆ.

ಜಿಲ್ಲೆಯಲ್ಲಿ ಒಟ್ಟು 5,69,044 ಪಡಿತರ ಚೀಟಿ ಸದಸ್ಯರು ಐದು ವರ್ಷಗಳ ಹಿಂದೆ ಇ-ಕೆವೈಸಿ(ekyc) ಮಾಡಿಸಿಕೊಂಡಿರುತ್ತಾರೆ. ಇದೀಗ ಅಂತಹ ಸದಸ್ಯರು ತಮ್ಮ ಇ-ಕೆವೈಸಿಯನ್ನು ಪುನಃ ಮಾಡಿಸಿಕೊಳ್ಳಬೇಕಾಗಿದೆ. ಇ-ಕೆವೈಸಿ ಬಾಕಿ ಇರುವ ಸದಸ್ಯರ ಪಟ್ಟಿಯನ್ನು ಈಗಾಗಲೇ ಸಂಬಧಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ನೀಡಲಾಗಿದೆ. ಆದ್ದರಿಂದ ಪಡಿತರ ಚೀಟಿದಾರರು ತಮ್ಮ ಹೆಸರು ಇ-ಕೆವೈಸಿ ಬಾಕಿ ಇರುವ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯಲ್ಲಿ ಪರಿಶೀಲಿಸಿಕೊಂಡು ನಿಮ್ಮ ಹೆಸರು ಇ-ಕೆವೈಸಿ ಬಾಕಿ ಇರುವ ಪಟ್ಟಿಯಲ್ಲಿ ಇದ್ದಲ್ಲಿ, ತಕ್ಷಣವೇ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ- ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ಇ-ಕೆವೈಸಿ ಮಾಡಿಸಿಕೊಳ್ಳದೆ ಬಾಕಿ ಉಳಿದಲ್ಲಿ, ಪಡಿತರ ಚೀಟಿಯ ಆಧಾರದ ಮೇಲೆ ಸರ್ಕಾರದಿಂದ ಪಡೆಯುತ್ತಿರುವ ವಿವಿಧ ಸೌಲಭ್ಯಗಳು ಮುಂದಿನ ದಿನಗಳಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಆದ್ದರಿಂದ ಜಿಲ್ಲೆಯ ಎಲ್ಲಾ ಪಡಿತರ ಚೀಟಿಯ ಸದಸ್ಯರು ಸಂಬAಧಪಟ್ಟ ನ್ಯಾಯಬೆಲೆ ಅಂಗಡಿಯಲ್ಲಿ ಶೀಘ್ರವಾಗಿ ಭೇಟಿ ನೀಡಿ “ಉಚಿತವಾಗಿ” ಇ-ಕೆವೈಸಿ ಮಾಡಿಸಿಕೊಳ್ಳಬೇಕು ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಪ್ರಕ್ರಿಯೆಗೆ ಹಣ ಪಡೆದರೆ ಆಹಾರ ಇಲಾಖೆ ಗ್ರಾಹಕರ ಸಹಾಯವಾಣಿ 1967 ಅಥವಾ ಸಂಬಂಧಪಟ್ಟ ತಹಶೀಲ್ದಾರ ಕಚೇರಿಯ ಆಹಾರ ಶಿರಸ್ತೇದಾರ ಮತ್ತು ಆಹಾರ ನಿರೀಕ್ಷಕರಿಗೆ ದೂರು ಸಲ್ಲಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.