ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ(Karwar): ‘ವರ್ಲ್ಡ್ ಸ್ಕಿಲ್-2026, ಜಾಗತಿಕ ಸ್ಪರ್ಧೆಯು(World Compitation) ಜಪಾನಿನ(Japan) ಐಚಿ ನಗರದಲ್ಲಿ ನಡೆಯಲಿದೆ. ಭಾರತವನ್ನು ಪ್ರತಿನಿಧಿಸಲು ಬಯಸುವ ಯುವಕ-ಯುವತಿಯರಿಗೆ ಇದೊಂದು ಅಧಿಕೃತ ರಾಜ್ಯಮಟ್ಟದ ವೇದಿಕೆಯಾಗಿದೆ. 63 ವಿವಿಧ ವೃತ್ತಿಪರ ಕೌಶಲ್ಯ ವಿಭಾಗಗಳಲ್ಲಿ ನೈಪುಣ್ಯತೆಯನ್ನು ಹೊಂದಿರುವ 16 ರಿಂದ 23 ವರ್ಷ ವಯೋಮಿತಿಯ ಯುವಜನರು ಭಾಗವಹಿಸಬಹುದು.

ಅತ್ಯುತ್ತಮ ಪ್ರದರ್ಶನ ನೀಡುವ ಅಭ್ಯರ್ಥಿಗಳಿಗೆ ನಗದು ಬಹುಮಾನಗಳು ಹಾಗೂ ಉಚಿತವಾಗಿ ಉನ್ನತ ಮಟ್ಟದ ಸುಧಾರಿತ ತರಬೇತಿಯನ್ನು ನೀಡಲಾಗುತ್ತದೆ. ರಾಜ್ಯಮಟ್ಟದಲ್ಲಿ ವಿಜೇತರಾದವರು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮವು(National Skill Development Corporation) ಆಯೋಜಿಸುವ ಪ್ರಾದೇಶಿಕ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗುತ್ತಾರೆ. ಅಲ್ಲಿ ಗೆದ್ದು, ಅಂತಿಮವಾಗಿ ಜಾಗತಿಕ ಮಟ್ಟದಲ್ಲಿ ‘ಟೀಮ್ ಇಂಡಿಯಾ’(Team India) ಪ್ರತಿನಿಧಿಸುವ ಸುವರ್ಣಾವಕಾಶ ಪಡೆಯುತ್ತಾರೆ. ಅಭ್ಯರ್ಥಿಗಳು ಕೇವಲ ಒಂದೇ ಕೌಶಲ್ಯಕ್ಕೆ ಮಾತ್ರ ನೋಂದಾಯಿಸಿಕೊಳ್ಳುವುದು.

‘ವರ್ಲ್ಡ್ ಸ್ಕಿಲ್ ಮತ್ತು ಇಂಡಿಯಾ ಸ್ಕಿಲ್ ಕರ್ನಾಟಕ-2026, ರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ವೆಬ್‌ಸೈಟ್ www.skillindiadigital.gov.inನ್ನು ನೋಂದಾಯಿಸಿಕೊಳ್ಳುವುದು. ಸೆ.22 ನೋಂದಾಯಿಸಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ: 7975633671 ನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.