ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋಕರ್ಣ(Gokarna) : ಮೀನುಗಾರಿಕೆಗೆ ತೆರಳುತ್ತಿದ್ದ ಮತ್ತೊಂದು ಯಾಂತ್ರಿಕ ದೋಣಿ ಮುಳುಗಡೆಯಾದ(Fishing Boat Sinks) ಘಟನೆ ಗೋಕರ್ಣದ ತದಡಿ(Gokarn Tadri) ಬಂದರು ಸಮೀಪದ ಅಳಿವೆ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಸುರೇಂದ್ರ ಮೂಡಂಗಿ ಅವರಿಗೆ ಸೇರಿದ ಓಂ ಶ್ರೀ ಲಕ್ಷ್ಮಿ ಕೃಪಾ ಹೆಸರಿನ ಈ ಬೋಟ್ ಅವಘಡಕ್ಕೆ ತುತ್ತಾಗಿದೆ. ಬೆಳಿಗ್ಗೆ ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ಅಳಿವೆ ಪ್ರದೇಶದಲ್ಲಿ(Seashore) ಬೋಟ್ ಮುಳುಗಿದೆ.
ಬೋಟ್ನಲ್ಲಿದ್ದ ನಾಲ್ವರು ಮೀನುಗಾರರನ್ನು ಮತ್ತೊಂದು ಮೀನುಗಾರಿಕಾ ಬೋಟ್ನವರು ರಕ್ಷಣಾ(Rescue) ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಅಳಿವೆ ಪ್ರದೇಶದಲ್ಲಿ ಹೂಳು ತುಂಬಿಕೊಂಡಿರುವುದೇ ಪದೇಪದೇ ಬೋಟ್ ಮುಳುಗಡೆಗೆ(Boat Sinks) ಕಾರಣ ಎನ್ನಲಾಗುತ್ತಿದೆ. ಈ ಪ್ರದೇಶದಲ್ಲಿ ಮೊನ್ನೆ ಭಾನುವಾರವೂ ಮತ್ತೊಂದು ಬೋಟ್ ಮುಳುಗಡೆಯಾಗಿತ್ತು. ಇದೀಗ ಎರಡು ದಿನಗಳ ಅಂತರದಲ್ಲೇ ಮತ್ತೊಂದು ಬೋಟ್ ಮುಳುಗಡೆಯಾಗಿರುವುದು ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಳಿವೆ ಪ್ರದೇಶದಲ್ಲಿನ ಹೂಳು ತೆರವುಗೊಳಿಸಿ, ಬೋಟ್ಗಳ ಸಂಚಾರಕ್ಕೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
