ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ವ್ಯವಹಾರ ವಿಚಾರದಲ್ಲಿ ಜನರಿಂದ ಹಣ ಪಡೆದು ಯಾಮಾರಿಸುತ್ತಿದ್ದ ಖತರನಾಕ್ ಆರೋಪಿಯೋರ್ವನಿಗೆ ಭಟ್ಕಳ ಗ್ರಾಮೀಣ ಠಾಣೆ (Bhatkal Rural Station) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಭಟ್ಕಳದ(Bhatkal) ಗಣೇಶ ನಗರ ಪುರವರ್ಗ(Puravarga) ನಿವಾಸಿ ಕೆ ಎಂ ಶರೀಫ್ ಖಾದರ್ ಬಂಧಿತ ಆರೋಪಿ. ಭಟ್ಕಳದ ಆಡಿಶನಲ್ ಜೆ.ಎಂ.ಎಫ್.ಸಿ ನ್ಯಾಯಾಲಯದ(JMFC Court) ದಸ್ತಗಿರಿ ವಾರೆಂಟ್ ಆಗಿದ್ದ ಆರೋಪಿಯನ್ನು ಪೊಲೀಸರು ಬೆಂಗಳೂರಿನ ಕಾವೇರಿ ಭವನದ ಬಳಿಯಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಆರೋಪಿ ಷರೀಪ್ ವ್ಯವಹಾರದ ವಿಷಯವಾಗಿ ವ್ಯಕ್ತಿಯೊಬ್ಬರಿಗೆ 20 ಲಕ್ಷ ರೂ ಮೌಲ್ಯದ ಚೆಕ್ ನೀಡಿದ್ದರು. ಆದರೆ ಶರೀಫ್ ಖಾದರ್ ಅವರ ಖಾತೆಯಲ್ಲಿ ಹಣವಿರಲಿಲ್ಲ. ಹೀಗಾಗಿ ಚೆಕ್ ಬೌನ್ಸ್ ಆಗಿತ್ತು. ಬರಬೇಕಿದ್ದ ಹಣವನ್ನ ಹಿಂತಿರುಗಿಸುವಂತೆ ವ್ಯಕ್ತಿ ಸಾಕಷ್ಟು ಕಾಡಿ-ಬೇಡಿದರೂ ಶರೀಫ್ ಹಣ ಕೊಟ್ಟಿರಲಿಲ್ಲ. ಹೀಗಾಗಿ ಆ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈತ ನ್ಯಾಯಾಲಯಕ್ಕೂ ಹಾಜರಾಗದೇ ತಪ್ಪಿಸಿಕೊಂಡಿದ್ದರು. 2016ರಲ್ಲಿಯೇ ನ್ಯಾಯಾಲಯ ಕೆ ಎಂ ಶರೀಫ್ ಖಾದರ್ ವಿರುದ್ಧ ವಾರೆಂಟ್ ಹೊರಡಿಸಿತ್ತು. ಅಲ್ಲಿ ಇಲ್ಲಿ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ ಕೆ ಎಂ ಶರೀಫ್ ಖಾದರ್ ಬೆಂಗಳೂರಿನಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರಿನ ಕಾವೇರಿ ಭವನದ (Bangalore Kaveri Bhavan) ಬಳಿ ಅಡ್ಡಾಡುತ್ತಿದ್ದ ಕೆ ಎಂ ಶರೀಫ್ ಖಾದರ್ ನನ್ನು ಭಟ್ಕಳ ಗ್ರಾಮೀಣ ಪೊಲೀಸ್(Bhatkal Rural Police) ಠಾಣೆಯ ಪಿಎಸ್‌ಐ ರನ್ನಾ ಗೌಡ ಪಾಟೀಲ ಬಂಧಿಸಿದ್ದಾರೆ. ಆರೋಪಿಯನ್ನ ಭಟ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 5ತಿಂಗಳ 17 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ತಲೆಮರೆಸಿಕೊಂಡ ಆರೋಪಿಯನ್ನು ಬಂಧಿಸುವಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಭಟ್ಕಳ ಗ್ರಾಮೀಣಾ ಪಿಎಸ್‌ಐ ರನ್ನಾ ಗೌಡ ಪಾಟೀಲ್, ಸಿಬ್ಬಂದಿ ಲೋಕೇಶ ನಾಯ್ಕ, ವಿನೋದ ರೆಡ್ಡಿ ಇವರನ್ನು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಅಭಿನಂದಿಸಿದ್ದಾರೆ.
ಇದನ್ನು ಓದಿ : ಖ್ಯಾತ ಪೋಟೋ ಜರ್ನಲಿಸ್ಟ್ ಪಾಂಡುರಂಗ ಹರಿಕಂತ್ರ ಇನ್ನೂ ನೆನಪು ಮಾತ್ರ.