ಕುಂದಾಪುರ(Kundapur) :  ಬೆಂಗಳೂರಿನಿಂದ ಶುಭ ಕಾರ್ಯ ನಿಮಿತ್ತ ಬಂದಿದ್ದ ಯುವಕರಿಬ್ಬರೂ ನೀರು ಪಾಲಾದ ಘಟನೆ ತಾಲೂಕಿನ ಬೀಜಾಡಿಯಲ್ಲಿ (Bijadi) ಸಂಭವಿಸಿದೆ.

ಬೆಂಗಳೂರು ದಾಸರಹಳ್ಳಿ (Bangalore Dasarahalli) ನಿವಾಸಿ ಸಂತೋಷ್  ಮತ್ತು ಕುಂದಾಪುರ ಮೂಲದ ಅಜಯ್ ನೀರುಪಾಲಾದವರು.

ಬೆಂಗಳೂರಿನ ದಾಸರಹಳ್ಳಿಯಿಂದ ಕೆಲ ಯುವಕರು ಬಿಜಾಡಿಯ ರಿಸಾರ್ಟ್ ವೊಂದರಲ್ಲಿ ತಂಗಿದ್ದರು. ಇಂದು ಬೆಳಗ್ಗೆ ನಾಲ್ವರು ಯುವಕರು ಸಮುದ್ರಕ್ಕಿಳಿದಿದ್ದರು. ಸಮುದ್ರಕ್ಕೆ ಇಳಿದ ನಾಲ್ವರ ಪೈಕಿ ಇಬ್ಬರು ನೀರುಪಾಲಾಗಿದ್ದರು.

ಓರ್ವ ಯುವಕನ ಶವ ಪತ್ತೆ, ಮತ್ತೊಬ್ಬನಿಗಾಗಿ ಶೋಧ ನಡೆಸಲಾಗಿದೆ. ಇನ್ನಿಬ್ಬರು ಯುವಕರು ಅಪಾಯದಿಂದ ಪಾರಾಗಿದ್ದಾರೆ. ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ. ಜೊತೆಗೆ ಬಂದಿದ್ದ ಮೋಕ್ಷಿತ್ ಮತ್ತು ಶ್ರೀಯಾನ್ ಅಪಾಯದಿಂದ ಪಾರಾಗಿದ್ದಾರೆ.
ಇದನ್ನು ಓದಿ : ಭಟ್ಕಳದಲ್ಲಿ ಗಾಂಜಾವಾಲಾರ ಬಂಧನ

ರತನ್ ಟಾಟಾ ಮುದ್ದಿನ ಶ್ವಾನಕ್ಕೂ ಆದಾಯದಲ್ಲಿ ಪಾಲು

ರಾಜ್ಯಪಾಲರ ಅರೋಗ್ಯದಲ್ಲಿ ಏರುಪೇರು

ಅಂಬಾಲ್ಪಡಿ ಹೆದ್ದಾರಿಯಲ್ಲಿ ಅಪಘಾತ

ಬೆಲೆಕೇರಿ ಅದಿರು ಪ್ರಕರಣ. ಶಾಸಕ ಸತೀಶ್ ಸೈಲ್ ಕಣ್ಣೀರು