ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದುಬೈ(Dubai) : ಭಾರತ ತಂಡದ ಕುಲದೀಪ್ ಯಾದವ್ ಅವರ ಮಾರಕ ಬೌಲಿಂಗ್  ಮತ್ತು ತಿಲಕ್ ವರ್ಮಾ ಅವರ ಹೋರಾಟದ ಅರ್ಧಶತಕಗಳಿಂದಾಗಿ ಟೀಮ್ ಇಂಡಿಯಾ(Team India) ಮತ್ತೊಮ್ಮೆ ಏಷ್ಯಾ ಕಪ್(Asia Cup) ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ದುಬೈನಲ್ಲಿ(Dubai) ನಡೆದ ಪಾಕಿಸ್ತಾನ(Pakistan) ವಿರುದ್ಧ ನಡೆದ ರೋಮಾಂಚಕ ಫೈನಲ್‌ನಲ್ಲಿ ಭಾರತ ವಿಜಯ ಪತಾಕೆ ಹಾರಿಸಿದೆ. ಇದರೊಂದಿಗೆ, ಟೀಮ್ ಇಂಡಿಯಾ(Team India) ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಹ್ಯಾಟ್ರಿಕ್ ಜಯಗಳಿಸಿದೆ. ಅಲ್ಲದೇ 9 ನೇ ಬಾರಿಗೆ ಏಷ್ಯಾ ಕಪ್ ಟ್ರೋಫಿಯನ್ನು(Asia Cup Trophy) ಗೆದ್ದುಕೊಂಡಿದೆ.  ಭಾರತ ಮತ್ತು ಪಾಕಿಸ್ತಾನ (India – Pakistan) ನಡುವಿನ ಮೊದಲ ಏಷ್ಯಾ ಕಪ್ ಫೈನಲ್  ಆಗಿದ್ದು, ಅದನ್ನು ಸಹ ಟೀಮ್ ಇಂಡಿಯಾ ಗೆದ್ದುಕೊಂಡಿರುವುದು ಗಮನಾರ್ಹವಾಗಿದೆ.

ಸೆಪ್ಟೆಂಬರ್ 28 ರ ಭಾನುವಾರ ಸಂಜೆ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ(Dubai International Stedium) ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ  ಬ್ಯಾಟಿಂಗ್ ಆರಂಭಿಸಿತ್ತು. ಆರಂಭಿಕ ಆಟಗಾರರು  ಆಕ್ರಮಣಕಾರಿ ಇನ್ನಿಂಗ್ಸ್‌ನೊಂದಿಗೆ ಉತ್ತಮ ಆರಂಭವನ್ನು ನೀಡಿದರು.   ಕುಲದೀಪ್ ಯಾದವ್ ಅವರ ಮಾರಕ ಬೌಲಿಂಗ್ ದಾಳಿ ನಡೆಸಿದರು. ಪಾಕಿಸ್ತಾನ 19.1 ಓವರ್ ಗಳಲ್ಲಿ ಒಟ್ಟು 146 ರನ್ ಗೆ ಅಲೌಟ್ ಆಯಿತು.

ಪಾಕಿಸ್ತಾನ ನೀಡಿದ ರನ್ ಗುರಿ ಬೆನ್ನತ್ತಿದ  ಟೀಮ್ ಇಂಡಿಯಾ(Team India)  20 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಇನ್ನಿಂಗ್ಸ್ ನಿಭಾಯಿಸಿ 57 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ನೀಡಿದರು. ಸ್ಯಾಮ್ಸನ್ ಔಟಾದ ನಂತರ, ಶಿವಂ ದುಬೆ ತಿಲಕ್‌ಗೆ ಬೆಂಬಲವಾಗಿ ಬಂದು ಕೆಲವು ದೊಡ್ಡ ಹೊಡೆತಗಳನ್ನು ಹೊಡೆದು ತಂಡವನ್ನು ಗೆಲುವಿನ ಸ್ಥಾನಕ್ಕೆ ತಂದರು. ಈ ಇಬ್ಬರೂ ಕೇವಲ 40 ಎಸೆತಗಳಲ್ಲಿ 60 ರನ್‌ಗಳ ತ್ವರಿತ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಸಮಯದಲ್ಲಿ ತಿಲಕ್ ತಮ್ಮ ಹೋರಾಟದ ಅರ್ಧಶತಕವನ್ನು ಪೂರ್ಣಗೊಳಿಸಿದರು ಮತ್ತು ತಂಡಕ್ಕೆ ಗೋಡೆಯಂತೆ ನಿಂತರು.

19 ನೇ ಓವರ್‌ನ ಕೊನೆಯ ಎಸೆತದಲ್ಲಿ ದುಬೆ ಔಟಾದರು, ಇದರಿಂದಾಗಿ ಭಾರತಕ್ಕೆ ಕೊನೆಯ ಆರು ಎಸೆತಗಳಲ್ಲಿ 10 ರನ್‌ಗಳು ಬೇಕಾಗಿದ್ದವು. ಕೊನೆಯ ಓವರ್‌ನಲ್ಲಿ, ತಿಲಕ್ ಹ್ಯಾರಿಸ್ ರೌಫ್ ಅವರ ಎರಡನೇ ಎಸೆತದಲ್ಲಿ ಸಿಕ್ಸ‌ರ್ ಬಾರಿಸುವ ಮೂಲಕ ಜಯ ಸಾಧಿಸಿದರು, ಇದನ್ನು ರಿಂಕು ಸಿಂಗ್ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ರೋಚಕ ಗೆಲುವು ಟೀಮ್ ಇಂಡಿಯಾದ್ದಾಯಿತು.

ಟೀಮ್ ಇಂಡಿಯಾಕ್ಕೆ 21 ಕೋಟಿ ಬಹುಮಾನ: ಪಾಕಿಸ್ತಾನ ವಿರುದ್ದ ಭಾರತ  ಏಷ್ಯಾ ಕಪ್ 2025 ರ ಫೈನಲ್‌ನಲ್ಲಿ  ಗೆಲುವು ಸಾಧಿಸಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 21 ಕೋಟಿ ರೂ.ಗಳ ಬಹುಮಾನದ ಹಣವನ್ನು ಘೋಷಿಸಿದೆ. ಈ ಬಗ್ಗೆ ತಂಡ ಮತ್ತು  ಸಿಬ್ಬಂದಿಗೆ 21 ಕೋಟಿ ಬಹುಮಾನದ ಹಣ ಎಂದು ಬಿಸಿಸಿಐ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.

ಇದನ್ನು ಓದಿ : ಕರಾವಳಿಯಲ್ಲಿ ಅಕ್ಟೋಬರ್ ಎರಡರವರೆಗೆ ಯಲ್ಲೋ ಅಲರ್ಟ್.

ಕಂಟೆನರ್ ವಾಹನಕ್ಕೆ ಬೈಕ್ ಢಿಕ್ಕಿ. ಸವಾರ ದುರ್ಮರಣ. ಇನ್ನೋರ್ವ ಗಂಭೀರ.

ಕಾಲ್ತುಳಿತ ದುರಂತ: ಮೃತರ ಕುಟುಂಬಕ್ಕೆ ನಟ ವಿಜಯ್ 20 ಲಕ್ಷ ಪರಿಹಾರ ಘೋಷಣೆ.

ತಮಿಳುನಾಡಿನ ಕರೂರಿನಲ್ಲಿ ಕಾಲ್ತುಳಿತ.