ಶಿರಸಿ : ಈ ಬಾರಿಯ ಎಸ್ಎಸ್ಎಲ್ಸಿ  ಪರೀಕ್ಷೆಯಲ್ಲಿ ಶ್ರೀ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಅನ್ವಿತ್ ಮಂಜುನಾಥ ಮೊಗೇರ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾನೆ.

ಪರೀಕ್ಷೆಯಲ್ಲಿ ಒಟ್ಟು 625ಕ್ಕೆ 621 ಅಂಕ ಗಳಿಸಿ ಸಾಧನೆ ಮಾಡಿದ್ದಾನೆ. ಕನ್ನಡದಲ್ಲಿ 125, ಇಂಗ್ಲಿಷ್ 99, ಸಂಸ್ಕೃತ 100,   ಗಣಿತ 100, ವಿಜ್ಞಾನ 98 ಹಾಗೂ ಸಮಾಜ ವಿಜ್ಞಾನ 99 ಅಂಕ ಗಳಿಸಿದ್ದಾನೆ.

ಈತ ಶಿರಸಿಯ   ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯದ  ವಿಷಯ ಪರಿವೀಕ್ಷಕರಾದ ಮಂಜುನಾಥ ಮೊಗೇರ ಮತ್ತು ಶಿರಸಿ ಮಹಿಳಾ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಸುಶೀಲಾ ಮೊಗೇರ ಅವರ ಪುತ್ರನಾಗಿದ್ದಾನೆ. ಮುಂದೆ ಕಂಪ್ಯೂಟರ್ ಸೈನ್ಸ್ ಮಾಡಿ ಉತ್ತಮ ಇಂಜಿನಿಯರ ಆಗಬೇಕೆಂಬ ಹಂಬಲ ಹೊಂದಿದ್ದೇನೆಂದು ಅನ್ವಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ
ಅನ್ವಿತ್ ಸಾಧನೆಗೆ ಶಾಲಾ ಶಿಕ್ಷಕ ವೃಂದ, ಕುಟುಂಬದವರು ಮತ್ತು ಕ್ಲಾಸ್ ಒನ್ ಗುತ್ತಿಗೆದಾರರಾದ ಬಾಬು ಮೊಗೇರ ಭಟ್ಕಳ ಅಭಿನಂದಿಸಿದ್ದಾರೆ.