ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) :  ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ(NH 63) ಪಕ್ಕದಲ್ಲಿರುವ  ಬ್ಯಾಂಕ್ ಆಫ್ ಬರೋಡಾ(Bank Of Baroda) ಸುಂಕಸಾಳ ಶಾಖೆಯಲ್ಲಿ ದರೋಡೆಗೆ ವಿಫಲ ಯತ್ನ ನಡೆದಿದೆ.

ರಾತ್ರಿ ಬ್ಯಾಂಕ್ ಹಿಂಭಾಗದಲ್ಲಿರುವ ಶೌಚಾಲಯದ ಗೋಡೆಯನ್ನು ಕೊರೆದು ಒಳ ಪ್ರವೇಶಿಸಲು ಕಳ್ಳರು ಯತ್ನಿಸಿದ್ದಾರೆ.  ನಂತರ ಬ್ಯಾಂಕ್‌ನ ಸ್ಟ್ರಾಂಗ್ ರೂಮ್ ಗೋಡೆಯನ್ನು(Strong Room Wall) ಒಡೆಯಲು ಪ್ರಯತ್ನಿಸಿದ ಗುರುತುಗಳು ಪತ್ತೆಯಾಗಿವೆ. ಆದರೆ ಯಾವುದೇ ಹಣ ಅಥವಾ ವಸ್ತುಗಳ ಕಳ್ಳತನವಾಗಿಲ್ಲ ಎಂದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ.

ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿದ ತಕ್ಷಣ ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಂಕ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.

ಸ್ಥಳದಲ್ಲಿ 15 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ(Ankola Police Station) ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ :   ನದಿ ತಿರುವು ಯೋಜನೆಗೆ ವ್ಯಾಪಕ ವಿರೋಧ. ಶಿರಸಿಯಲ್ಲಿ ನಡೆದ ಬೃಹತ್ ಹೋರಾಟಕ್ಕೆ ಸಾವಿರಾರು ಮಂದಿ.

ಕೊಟ್ಟಿಗೆಯಲ್ಲಿದ್ದ ಎಂಟು ಹಸುಗಳ ಕದ್ದು ಪರಾರಿಯಾದ ಗೋಗಳ್ಳರು.

ಶಾಲೆಯಿಂದ ಮನೆಗೆ ಮರಳದೇ ರೈಲು ಹತ್ತಿದ ಬಾಲಕರು. ಗೋವಾದಲ್ಲಿ ಸುರಕ್ಷಿತವಾಗಿ ಪತ್ತೆ ಮಾಡಿದ ರೈಲ್ವೆ ಪೊಲೀಸರು.