ಅಂಕೋಲಾ(ANKOLA): ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆ ದೋಚಿ ಪರಾರಿಯಾದ ಕಳ್ಳರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರ(Chikkaballapura) ಮೂಲದ ಸುಲ್ತಾನ್ ಭಾಷಾ (22), ಆಂಧ್ರಪ್ರದೇಶದ(Andrapradesha) ಮಹೇಶ್ ಉಪ್ಪಾರ್ (25), ಬೆಂಗಳೂರು ಕಾಟನಪೇಟ್ ದ(Bangalore cottanpet ) ಮುದಾಸ್ಸಿರ್ ಪಾಷಾ (33) ಬಂಧಿತರು.

ಪಟ್ಟಣದ ಕೇಣಿ(Keni) ಸೇತುವೆಯ ಪಕ್ಕದ  ಮೋಹನ ನಾರಾಯಣ ನಾಯಕ ಎಂಬುವವರ ಮನೆಯಲ್ಲಿ ಸೆಪ್ಟೆಂಬರ್ 28ರಂದು ಕಳ್ಳತನ ನಡೆಸಿದ್ದರು.  ಮನೆಯ ಮುಂಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು  ಬಂಗಾರದ ಮಂಗಲಸೂತ್ರ, ಕಿವಿಯೋಲೆ, ಬಳೆಗಳನ್ನು ಕದ್ದು ಪರಾರಿಯಾಗಿದ್ದರು.

ಅಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯೊಳಗಡೆ ಮಣಿಪಾಲ ಆಸ್ಪತ್ರೆಗೆ(Manipal Hospital) ಹೋಗಿ ಬರುವಷ್ಟರಲ್ಲಿ ನಡೆದ ಕಳ್ಳತನ ಪ್ರಕರಣ ಬೆಚ್ಚಿ ಬೀಳಿಸಿತ್ತು. ಸುಮಾರು ಏಳು ಲಕ್ಷ ರುಪಾಯಿಗಳಿಗೂ ಅಧಿಕ ಮೌಲ್ಯದ ಬಂಗಾರದ ಆಭರಣಗಳನ್ನು ಅಪಹರಿಸಿದ್ದರು. ಸ್ಥಳಕ್ಕೆ ಅಂಕೋಲಾ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದರೂ ಕಳ್ಳರ ಪತ್ತೆಯಾಗಿರಲಿಲ್ಲ.

ಚಿಂತಾಮಣಿಯಲ್ಲಿ (Chintamani) ನಡೆದ ಕಳ್ಳತನ(Theft) ಪ್ರಕರಣದಲ್ಲಿ ಸಿಕ್ಕಿಬಿದ್ದ ಕಳ್ಳರನ್ನು ತೀವ್ರ ವಿಚಾರಣೆ ನಡೆಸುತ್ತಿರುವ ವೇಳೆ ಅಂಕೋಲಾದ ಕೇಣಿಯಲ್ಲಿ  ಕಳ್ಳತನ ಮಾಡಿರೋದಾಗಿ ಬಾಯ್ದಿಟ್ಟಿದ್ದಾರೆ. ಕೋಲಾರ ಪೊಲೀಸರು(Kolara Police) ಮಂಗಳವಾರ ಆರೋಪಿತರನ್ನು ಕೇಣಿಯ ಮನೆಯಲ್ಲಿ ಮಹಜರು ನಡೆಸಿದ್ದಾರೆ.

ಮುರ್ಡೇಶ್ವರ (MURDESHWAR) ಬಳಿಯ ಮನೆ ಕಳ್ಳತನ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಬೆಂಗಳೂರು, ಆಂಧ್ರಪ್ರದೇಶ, ಚಿಕ್ಕ ಬಳ್ಳಾಪುರದವರಾಗಿರುವ ಈ ಮೂವರು ಕಳ್ಳರು ದೋಚಿದ ಹಣವನ್ನು ಮೋಜು ಮಸ್ತಿಗಾಗಿ ಬಳಸಿಕೊಳ್ಳುತ್ತಿದ್ದರು. ಹಲವೆಡೆ ಕದ್ದು ತಂದ ಒಡವೆಗಳನ್ನು ಕೋಲಾರದ ಚಿಂತಾಮಣಿಯ ಆಭರಣದ ಅಂಗಡಿಯಲ್ಲಿ ಮಾರಾಟ ಮಾಡುವ ಸಂದರ್ಭದಲ್ಲಿ ಈ ಕಳ್ಳರು ಪೊಲೀಸರ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ತನಿಖೆ ಚುರುಕುಗೊಳಿಸಿದ ಪೊಲೀಸರ ಚಾಕಚಕ್ಯತೆಯಿಂದಾಗಿ ಮುರುಡೇಶ್ವರ ಹಾಗೂ ಅಂಕೋಲೆಯ ಕೇಣಿಯಲ್ಲಿ ನಡೆಸಿದ ಕಳ್ಳತನ ಪ್ರಕರಣವನ್ನು ಒಪ್ಪಿಕೊಂಡಿದ್ದಾರೆ.
ಗೋವಾದಲ್ಲಿ ಕ್ಯಾಸಿನೋ(Goa Kyasino) ಚಟ ಬೆಳೆಸಿಕೊಂಡ ಈ ಮೂವರು ಕಳ್ಳರು ಕಳ್ಳತನ ಮಾಡುತ್ತಿರುವುದಾಗಿ ಬಾಯಿ ಬಿಟ್ಟಿದ್ದಾರೆ.

ಇದನ್ನು ಓದಿ,: ಕಾರು ಪಲ್ಟಿ ಚಾಲಕ ದುರ್ಮರಣ

ಅನಿವಾಸಿ ಭಾರತೀಯ ಸದನ್ ದಾಸ್ ಜಾನಪದ ಪರಿಷತ್ ಅಧ್ಯಕ್ಷ

ಅಮೇರಿಕ ಜರ್ಮನಿಯಲ್ಲಿ ಇಂಜಿನಿಯರ್. ಈಗ ಅಸಹಾಯಕ

ಭಟ್ಕಳ ಪಟ್ಟಣದಲ್ಲಿ ಕೆಲವೆಡೆ ಬಂದ್