ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಂದಾಪುರ(Kundapur) : ಪ್ರವಾಸಕ್ಕೆ ಬಂದಿದ್ದ ಯುವಕರು ಸಮುದ್ರ ಪಾಲಾದ ಘಟನೆ ಉಡುಪಿ(Udupi) ಜಿಲ್ಲೆಯ ಕುಂದಾಪುರ ತಾಲ್ಲೂಕಿನ(Kundapur) ಗೋಪಾಡಿ ಚರ್ಕಿಕಟ್ಟು ಸಮುದ್ರ ತೀರದಲ್ಲಿಸಂಭವಿಸಿದೆ.

ದುರ್ಘಟನೆಯಲ್ಲಿ ಮೂವರು ಯುವಕರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.  ಬೆಂಗಳೂರಿನಿಂದ(Bangalore) ಬಂದಿದ್ದ ಹತ್ತು ಜನ ಯುವಕರ ತಂಡ ಕುಂಭಾಶಿಯ ಗಾಯತ್ರಿ ಕಂಫರ್ಟ್ಸ್ ನಲ್ಲಿ ವಾಸ್ತವ್ಯ ಹೂಡಿತ್ತು. ಇವರಲ್ಲಿ ಒಂಬತ್ತು ಮಂದಿ ಗೋಪಾಡಿ ಸಮುದ್ರ ತೀರಕ್ಕೆ(Gopadi Beach) ವೀಕ್ಷಣೆಗೆ ಹೋಗಿದ್ದು, ಏಳು ಮಂದಿ ಸಮುದ್ರದ ತೀರದಲ್ಲಿ ಆಟವಾಡುತ್ತಾ ನೀರಿಗೆ ಇಳಿದಿದ್ದರು. ಆ ಸಮಯದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿ, ನಾಲ್ವರು ಯುವಕರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರಲ್ಲಿ ಒಬ್ಬನನ್ನು ಸ್ಥಳೀಯರ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಕೋಸ್ಟಲ್ ಗಾರ್ಡ್ ಹಾಗೂ ಲೈಪ್ ಗಾರ್ಡ್  ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ‌

ಗಂಭೀರ ಗೊಂಡಾತನನ್ನು  ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ(Ishwar Malpe) ಹಾಗೂ ಜೀವನ್ ಮಿತ್ರ ನಾಗರಾಜ್ ಪುತ್ರನ್ ರವರು ಸ್ಥಳೀಯರ ಸಹಕಾರದಿಂದ ಇನ್ನೂ ಮೂವರ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ (Kundapur Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಭಟ್ಕಳದಲ್ಲಿ ಮೆರೆದ ಮಾನವೀಯತೆ. ಮೃತ ಭಿಕ್ಷುಕನ ಅಂತ್ಯಸಂಸ್ಕಾರ.

ಇಂದು ಆಕಾಶದಲ್ಲಿ ಖಗೋಳ ವಿಸ್ಮಯ. ರಕ್ತವರ್ಣದಲ್ಲಿ ಕಾಣಿಸಲಿದ್ದಾನೆ ಚಂದಿರ.

ಭಾವನಾ ರಾಮಣ್ಣಗೆ ಹೆಣ್ಣುಮಗು. ಐವಿಎಪ್ ಮೂಲಕ ಮಗು ಪಡೆದ ನಟಿ