ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ(Ankola) : ಕಾಶ್ಮೀರದ ಪಹಲ್ಗಾಮ್ನಲ್ಲಿ(Kashmira Pehalgam) ನಡೆದ ಉಗ್ರರ ದಾಳಿ ಖಂಡಿಸಿ ಎಲ್ಲೆಡೆ ಆಕ್ರೋಶ ಹೆಚ್ಚಾಗಿದೆ. ಪಾಕ್ (Pak) ವಿರುದ್ದ ನಗರದ ಬಸ್ ನಿಲ್ದಾಣದ ಎದುರು ರಸ್ತೆಯಲ್ಲಿ ಪಾಪಿ ದೇಶವನ್ನು ಧ್ವಂಸ ಮಾಡಿ ಎಂಬರ್ಥದಲ್ಲಿ ಬರಹವುಳ್ಳ ಪಾಕಿಸ್ತಾನದ ಧ್ವಜವನ್ನು(Pakistan Flag) ಅಪರಿಚಿತರು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪೇಪರ್ ಮೇಲೆ ಮುದ್ರಿತಗೊಂಡ ಪಾಕಿಸ್ತಾನದ ಧ್ವಜ(Pakistan Flag) ಕಾಲಡಿಯಲ್ಲಿ ಕಂಡುಬಂದಿತ್ತು. ಮಾಹಿತಿ ಪಡೆದ ತಕ್ಷಣ ಬಂದ ಅಂಕೋಲಾ(Ankola) ಪಿಎಸ್ಐ ಉದ್ದಪ್ಪ ಧರೆಪ್ಪನವರ್ ಪೋಸ್ಟರ್ ತೆರವು ಮಾಡಿ ವಶಕ್ಕೆ ಪಡೆದುಕೊಂಡರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಪಾಕಿಸ್ತಾನದ (Pakisthana) ವಿರುದ್ಧ ಭಾರತ(Bharat) ಸಮರ ಸಾರುತ್ತಿದೆ. ದೇಶದ ಜನರ ಕುತೂಹಲ ಗಡಿಯಲ್ಲಿದೆ. ಶತ್ರು ರಾಷ್ಟ್ರ ಪಾಕ್ ವಿರುದ್ಧ ಆಕ್ರೋಶ ಬುಗಿಲೆದ್ದಿದೆ.
ಇದನ್ನು ಓದಿ : ದಾಂಡೇಲಿಯ ಕಾರ್ಖಾನೆಯಲ್ಲಿ ಬೃಹತ್ ಗಾತ್ರದ ಪ್ಯಾನೆಲ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು
ಯುದ್ಧದ ಆತಂಕ. ಪಾಕ್ ಪ್ರಧಾನಿ ಆಸ್ಪತ್ರೆಗೆ ದಾಖಲು. ರಹಸ್ಯ ಕಾಪಾಡಲು ಹರಸಾಹಸ.
ಅನ್ಯ ಕೋಮಿನ ಬಾಣಂತಿಗೆ ತುರ್ತು ರಕ್ತದಾನ ಮಾಡಿದ ವಿಶೇಷ ಚೇತನ ವ್ಯಕ್ತಿ.