ಇ ಸಮಾಚಾರ ಡಿಜಿಟಲ್ ನ್ಯೂಸ್ (esamacharadigital news)ಭಟ್ಕಳ(Bhatkal) : ತಮ್ಮ ನಾಲ್ಕನೇ ವಯಸ್ಸಿನಿಂದಲೇ ಭರತನಾಟ್ಯವನ್ನು(Bharatanatya) ಕಲಿಯಲು ಆರಂಭಿಸಿದ ಪುಟ್ಟ ಪೋರಿಯೊಬ್ಬಳು ಇದೀಗ ರಂಗಪ್ರವೇಶಕ್ಕೆ(Rangapravesha) ಸಿದ್ದಳಾಗಿದ್ದಾಳೆ. ಅವಳೇ ಭಟ್ಕಳ ತಾಲೂಕಿನ ಶಿರಾಲಿ ನಿವಾಸಿಯಾಗಿರುವ ಶಾರದಾ ಮತ್ತು ರಾಮಚಂದ್ರ ಮೊಗೇರ ಇವರ ಪುತ್ರಿ ಧನಲಕ್ಷ್ಮೀ ಮೊಗೇರ(Dhanalakshmi Moger).

ಧನಲಕ್ಷ್ಮೀ ಭಟ್ಕಳದ ಝೇಂಕಾರ್ ಕಲಾ ಸಂಸ್ಥೆಯಲ್ಲಿ(Zhenkar Academy) ನೃತ್ಯ ಮತ್ತು ಸಂಗೀತ(Dance and Music) ಶಿಕ್ಷಣ ಪಡೆಯುತ್ತಾ ಜೂನಿಯರ್ ಹಂತವನ್ನು ವಿದುಷಿ ನಮೃತಾ ತಿಲಕ್ ರಾವ್ ಇವರಲ್ಲಿ ಅಭ್ಯಸಿಸಿ, ಸೀನಿಯರ್ ಹಾಗೂ ವಿದ್ವತ್ ಹಂತವನ್ನು ವಿದುಷಿ ನಯನಾ ಪ್ರಸನ್ನ ಪ್ರಭು ಇವರಲ್ಲಿ ಪೂರ್ಣಗೊಳಿಸಿದ್ದಾಳೆ. ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳನ್ನು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮುಂಬೈ ಇವರು ನಡೆಸುವ ವಿಶಾರದ, ಅಲಂಕಾರ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ದಿ| ಶ್ರೀ ವೆಂಕಟೇಶ ಭಟ್ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿ ಜೂನಿಯರ್ ಹಂತವನ್ನು ಪೂರ್ಣಗೊಳಿಸಿದ್ದಾಳೆ.

ಓದಿನಲ್ಲಿಯೂ ಸದಾ ಮುಂದಿದ್ದ ಈಕೆ ಎಸ್ಎಸ್ಎಲ್ಸಿಯಲ್ಲಿ ತಾಲೂಕಿಗೆ ಒಂಭತ್ತನೇ ಸ್ಥಾನ, ಪಿಯುಸಿ ಯಲ್ಲಿ ತಾಲೂಕಿಗೆ ಪ್ರಥಮ, ಬಿಎಸ್ಸಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ(Karnataka University) ನಾಲ್ಕನೇ ರ್ಯಾಂಕ್ ಪಡೆದಿರುತ್ತಾಳೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ(Mangalore University) ಎಂಎಸ್ಸಿ ಪದವಿಯನ್ನು(MSc Degree) ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಕೆ ಸೆಟ್ ಪರೀಕ್ಷೆಯಲ್ಲಿಯೂ(K Set Exam) ಉತ್ತೀರ್ಣಳಾಗಿದ್ದಾಳೆ.
ಬಾಲ್ಯದಿಂದಲೂ ಪಠ್ಯ ಹಾಗೂ ಪಠ್ಯತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿರುವ ಧನಲಕ್ಷ್ಮೀ ಮೊಗೇರ(Dhanalaxmi Moger), ಭಗವಂತನ ಅನುಗ್ರಹ, ಗುರುಗಳ ಮಾರ್ಗದರ್ಶನ, ತಂದೆ-ತಾಯಿಯ ಪ್ರೋತ್ಸಾಹ, ತನ್ನ ಸ್ವಯಂಶ್ರದ್ಧೆ ಹಾಗೂ ಸತತ ಪರಿಶ್ರಮದಿಂದ ರಂಗಪ್ರವೇಶಕ್ಕೆ ಸಿದ್ಧಳಾಗಿದ್ದಾಳೆ.

* 2017ರ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನಗಳಿಸಿ ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದಾಳೆ.
* ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಸೀನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್.
*ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ.
* ಅಲಂಕಾರ್ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ತೃತೀಯ ಸ್ಥಾನ.
* 2022ನೇ ಸಾಲಿನಲ್ಲಿ ನಡೆದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ತೃತೀಯ ಸ್ಥಾನ
* ಕೆನರಾ ಪ್ಲಸ್ ವಾಹಿನಿಯು ನಡೆಸಿದ ಜಿಲ್ಲಾಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ.
* ಕರಾವಳಿ ಉತ್ಸವ, ಯುಗಾದಿ ಉತ್ಸವ, ಉಡುಪಿಯ ರಾಜಾಂಗಣ, ಭಟ್ಕಳ, ಹೊನ್ನಾವರ, ಕುಮಟಾ, ಕಾರವಾರ, ಮುಂಡಗೋಡ, ದಾಂಡೇಲಿ, ಗದಗ ಮುಂತಾದ ಹಲವೆಡೆ ನೂರಾರು ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಧನಲಕ್ಷ್ಮೀಯದ್ದು.
ನೃತ್ಯವಿದುಷಿ ನಯನಾ ಪ್ರಸನ್ನ ಭಟ್ಕಳ ಇವರ ಗರಡಿಯಲ್ಲಿ ಭರತನಾಟ್ಯ ಸತತ ಅಭ್ಯಾಸ ಮಾಡಿ ಇದೀಗ ವಿದುಷಿಯಾಗುವ ಮೂಲಕ ರಂಗಪ್ರವೇಶ ಮಾಡುತ್ತಿದ್ದಾಳೆ. ಇದೇ ಜನವರಿ 31ರಂದು ಸಂಜೆ ಭಟ್ಕಳದ ನಾಗ ಯಕ್ಷೆ ಸಭಾಂಗಣದಲ್ಲಿ(Bhatkal Nagayakshe Sabhangana) ರಂಗಪ್ರವೇಶಕ್ಕೆ ಸಿದ್ದತೆಗಳು ನಡೆದಿದೆ. ರಂಗಪ್ರವೇಶದ ನೃತ್ಯ ಬಂಧುಗಳ ನಡುವೆ ಸಭಾ ಕಾರ್ಯಕ್ರಮ ಮತ್ತು ಗುರುವಂದನೆ ಕಾರ್ಯಕ್ರಮ ಇದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಆಗಮಿಸುವಂತೆ ಝೇಂಕಾರ ಕಲಾಸಂಸ್ಥೆ ಮತ್ತು ಧನಲಕ್ಷ್ಮೀ ಪಾಲಕರಾದ ಶಾರದ ಮತ್ತು ರಾಮಚಂದ್ರ ಮೊಗೇರ ಕೋರಿಕೊಂಡಿದ್ದಾರೆೆ.
ಇದನ್ನು ಓದಿ : ವಿಮಾನ ದುರಂತ. ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವು.
ಜಾತ್ರೆಗೆ ತೆರಳಿದ್ದಾಗ ಮನೆಗೆ ಬೆಂಕಿ. ಅನ್ಯ ಕೋಮಿನ ಕುಟುಂಬದ ಕೃತ್ಯ ಎಂದ ಮನೆಯವರು. ಎಸ್ಪಿ ಭೇಟಿ.
