ಗೋಕರ್ಣ(GOKARN):  ಇಲ್ಲಿನ ಮುಖ್ಯ ಕಡಲ ತೀರದಲ್ಲಿ (MAIN BEACH) ಈಜಾಡುತಿದ್ದ ಯುವಕರನ್ನ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದಾಗ ಲೈಫ್ ಗಾರ್ಡ್ (LIFEGUARD)ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಮೈಸೂರು(MYSORE) ಜಿಲ್ಲೆಯ  ಅಭಿ (20) ಎಂಬಾತನನ್ನ  ಕರ್ತವ್ಯ ನಿರತ ಲೈಫ್ ಗಾರ್ಡ್ ಸಿಬ್ಬಂದಿಗಳು,  ಪ್ರವಾಸಿ ಮಿತ್ರ, ಬೀಚ್ ಸೂಪರ್ವೈಸರ್ ಹಾಗೂ  ಸ್ಥಳೀಯರ ಸಹಾಯದಿಂದ ರಕ್ಷಿಸಲಾಗಿದೆ.

ಗೆಳೆಯರ ಜೊತೆ  ಅಭಿ ದಸರಾ ಹಬ್ಬದ(DASARA FESTIVAL) ರಜೆಗೆ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ. ಸಮುದ್ರದಲ್ಲಿ ಈಜಾಡಲು ತೆರಳಿದಾಗ  ಸುಳಿಗೆ ಸಿಲುಕಿ ನೀರು ಪಾಲಾಗುವ ಹಂತದಲ್ಲಿದ್ದ.  ಇದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಮೋಹನ್ ಅಂಬಿಗ, ಶಿವಪ್ರಸಾದ ಅಂಬಿಗ, ಲೋಕೇಶ್ ಹರಿಕಂತ್ರ, ಗಣೇಶ್ ಅಂಬಿಗ,  ಬೀಚ್ ಸುಪ್ರವೈಸರ್ ರವಿ ನಾಯ್ಕ,  ಪ್ರವಾಸಿ ಮಿತ್ರ ಸತೀಶ್ ನಾಯ್ಕ್ ಹಾಗೂ  ಸ್ಥಳೀಯರಾದ ರಾಜೇಶ್ ಅಂಬಿಗ ಸಹಾಯ ಮಾಡಿದ್ದಾರೆ.

ಇದೇ ವೇಳೆ ರಕ್ಷಣೆಗೆ ಒಳಗಾದ  ಇನ್ನೊಬ್ಬ ಯುವಕ ಮಾಹಿತಿ ನೀಡುವ ಸಮಯದಲ್ಲಿ ಮಾಹಿತಿ ನೀಡದೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಗೋಕರ್ಣ ಪೊಲೀಸ್ ಠಾಣಾ (GOKARN POLICE STATION) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಉತ್ತರಕನ್ನಡ, ಉಡುಪಿಗೆ ಗಿಫ್ಟ್

ವಾಯುಭಾರ ಕುಸಿತ. ಅಕ್ಟೋಬರ್ 16ರವರೆಗೆ ಮಳೆ

ಕರಾವಳಿಯಲ್ಲಿ ಬಾಂಗ್ಲಾ ದೇಶಿಯರು

ಕೊಲೆ ಆರೋಪಿಗಳ ಮೇಲೆ ಪೊಲೀಸರ ಪೈರಿಂಗ್