ಭಟ್ಕಳ : ಮುರುಡೇಶ್ವರ 110 ಕೆವಿ ಮಾರ್ಗದಲ್ಲಿ ಐದಾರು ಕಡೆಗಳಲ್ಲಿ ಇನ್ಸೂಲೇಟರ್ ಫ್ಲಾಶ್ ಓವರ್ ಆಗಿದೆ. ಹೀಗಾಗಿ ಮೇ 29ರಂದು ಬುಧವಾರ ಭಟ್ಕಳ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
110 ಕೆವಿ ಹೊನ್ನಾವರ – ಮುರುಡೇಶ್ವರ ಮಾರ್ಗ ದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ. ಬೆಳಿಗ್ಗೆ 09 ಗಂಟೆಯಿಂದ 04 ಗಂಟೆವರೆಗೆ ಸಂಪೂರ್ಣ ಭಟ್ಕಳ ತಾಲೂಕಿನಲ್ಲಿ ವಿದ್ಯುತ್ ಇರೋದಿಲ್ಲ. ನಾಗರಿಕರು ಸಹಕರಿಸುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ.