ಭಟ್ಕಳ : ಜಿಲ್ಲೆಯ ಕರಾವಳಿಯಲ್ಲಿ ಬಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಭಟ್ಕಳ ತಾಲೂಕಿನಾದ್ಯಂತ ಅತ್ಯಧಿಕ ಪ್ರಮಾಣದ ಮಳೆ ಸುರಿದಿದೆ. ಒಟ್ಟು 95 ಮಿಲಿಮೀಟರ್ ಮಳೆ ಬಿದ್ದಿದೆ.

ತಾಲೂಕಿನ ಹೆಬಳೆ ಗ್ರಾಮ ವ್ಯಾಪ್ತಿಯ ಜಟಗೇಶ್ವರ ದೇವಾಲಯ ಸಮೀಪದ ಪ್ರದೇಶ ಸಂಪೂರ್ಣ ಜಲವೃತವಾಗಿದೆ.

ಮುರ್ಡೇಶ್ವರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ  ಪ್ರದೇಶ ನೀರಿನಿಂದ ಸುತ್ತುವರಿದಿದೆ. ಮಳೆ ನೀರಿನಿಂದಾಗಿ ಭಟ್ಕಳದ ಕೆಎಸ್ಆರ್ಟಿಸಿ  ಬಸ್ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವ್ರತವಾಗಿದೆ. ಉತ್ತರಕನ್ನಡ ಜಿಲ್ಲೆಯ ಇತರ ಕಡೆಗಳಲ್ಲೂ ಬಾರೀ ವರ್ಷಧಾರೆಯಾಗುತ್ತಿದೆ. ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ.