ನವದೆಹಲಿ(NEWDELHI): ಜಗತ್ತಿನ ಕೈಗಾರಿಕೋದ್ಯಮದಲ್ಲಿ ಗಮನಾರ್ಹವಾದ ಸಾಧನೆ ಮಾಡಿ ಕೊನೆವರೆಗೂ ತಮ್ಮ ಗೌರವ ಉಳಿಸಿಕೊಂಡ ಉದ್ಯಮಿ ರತನ್ ಟಾಟಾ(RATAN TATA) ನಿಧನರಾಗಿದ್ದಾರೆ.
ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮುಂಬೈನ ಬ್ರಿಚ್ ಕ್ಯಾಂಡಿ(MUMBAI BRICH CANDY HOSPITAL) ಆಸ್ಪತ್ರೆಯಲ್ಲಿ ನಿನ್ನೆ ಕೊನೆಯಸಿರೆಳೆದಿದ್ದಾರೆ.
ಲಾಭವನ್ನ ಬಯಸದೆ ಉದ್ಯಮಿಯಾಗಿ ಭಾರತ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರು ಮುನ್ನಡೆಸಿದ ಕಂಪನಿಗಳನ್ನ ಗಮನಿಸಿದರೆ ಅವರ ಸಾಧನೆ ತಿಳಿಯಬಲ್ಲದು. ಟಾಟಾ ಸ್ಟೀಲ್(TATA STEEL), ಟಾಟಾ ಮೋಟರ್ಸ್(TATA MOTORS), ಟಾಟಾ ಟೆಕ್ನಾಲಜಿಸ್(TATA TECHNOLOGYS), ಟಿಸಿಎ(TCA), ಟಾಟಾ ಪವರ್ಸ್( TATA POWERS ), ಟಾಟಾ ಕಸ್ಟಮರ್ಸ್ ಸರ್ವೀಸ್(TATA CUSTOMERS SERVICES), ಟಾಟಾ ಕೆಮಿಕಲ್ಸ್(TATA CHEMICALS), ತಾಜ್ ಹೋಟೆಲ್ಸ್(TAJ HOTEL), ಏರ್ ಇಂಡಿಯಾ(AIR INDIA), ಜಾಗ್ವಾರ್ – ಲ್ಯಾಂಡ್ ರೋವರ್(JAGUAR LAND ROVERS), ಟಾಟಾ ಪ್ಲೇ(TATA PLY), ಟಾಟಾ ಸಾಲ್ಟ್(TATA SALT), ವೋಲ್ಟಾಸ್(VOLTAS), ತನಿಷ್ಕ್ ಜ್ಯೂವೆಲ್ಸ್(TANSHIK JEWELES). ಲಕ್ಷಾಂತರ ಜನರು ಅವರ ಕಂಪನಿಯಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ.
ರತನ್ ನೇವಲ್ ಟಾಟಾ ಅವರು ಟಾಟಾ ಗ್ರೂಪ್ ಅನ್ನು ಸ್ಥಾಪಿಸಿದ ಜಮ್‌ಸೆಟ್ಜಿ ಟಾಟಾ ಅವರ ಮರಿ ಮೊಮ್ಮಗ ಆಗಿದ್ದರು. ಡಿಸೆಂಬರ್ 28, 1937 ರಂದು ಮುಂಬೈನಲ್ಲಿ ಜನಸಿದ್ದರು. ತಂದೆ ನೇವಲ್ ಟಾಟಾ ಮತ್ತು ತಾಯಿ ಸೂನಿ ಟಾಟಾ. ಅಜ್ಜಿ ನವಾಜಬಾಯಿ ಟಾಟಾ ಆಶ್ರಯದಲ್ಲಿ ಬೆಳೆದವರು. ಸಾವಿರಾರು ಕೋಟಿ ರೂ ಹಣ ಇದ್ದರೂ ರತನ್ ಟಾಟಾ ಅವರು ತಮ್ಮ ಜೀವನದಲ್ಲಿ ಮದುವೆಯೇ ಆಗದಿರುವುದು ಅಚ್ಚರಿ. ಈ ಹಿಂದೆ ನಾಲ್ಕೈದು ಬಾರಿ ವಿವಾಹದ ಬಗ್ಗೆ ಪ್ರಸ್ತಾಪವಾಗಿದ್ದಾದರೂ ರತನ್ ಮದುವೆಗೆ ಒಪ್ಪಿರಲಿಲ್ಲ.
1962 ರಲ್ಲಿ ರತನ್ ಅವರು ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ(AMERICA LAS ENJALIS) ಕೆಲಸ ಮಾಡುತ್ತಿದ್ದರು. ಆಗ ಅವರಿಗೂ ಯುವತಿಯೊಂದಿಗಿನ ಪ್ರೀತಿಯ ಅನುಭವ ಆಗಿದೆ. ಆದರೆ, ಆಗ ಇಂಡೋ-ಚೀನಾ ಯುದ್ಧದ ನಡೆಯುತ್ತಿದ್ದ ಕಾರಣ ಪ್ರೀತಿಸಿದ ಹುಡುಗಿಯ ಪೋಷಕರು ಭಾರತಕ್ಕೆ ಆಗಮಿಸಲು ನಿರಾಕರಿಸಿದರು. ಹೀಗಾಗಿ, ಪ್ರೀತಿ ಅಲ್ಲಿಯೇ ಅಂತ್ಯವಾಗಿದೆ. 1961 ರಲ್ಲಿ ತಮ್ಮ ವೃತ್ತಿ ಜೀವನವನ್ನು ರತನ್ ಟಾಟಾ ಪ್ರಾರಂಭಿಸಿದರು. ಟಾಟಾ ಸ್ಟೀಲ್ಸ್ ಮಹಡಿಯಲ್ಲಿ ಸ್ವತಃ ತಾವೇ ಕೆಲಸ ಮಾಡುವ ಮೂಲಕ ತಳಮಟ್ಟದಿಂದ ಕೆಲಸ ಕಲಿತು ಅದರ ಅನುಭವದಿಂದ ಮೇಲೆ ಬಂದರು. ಇದು ಅವರ ಭವಿಷ್ಯದ ನಿರ್ಧಾರಗಳಿಗೆ ದೊಡ್ಡಮಟ್ಟಿನಲ್ಲಿ ನೆರವಾಯಿತು ಎಂದು ಅವರೇ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ಭಾರತೀಯ ಆರ್ಥಿಕತೆಯ ಉದಾರೀಕರಣ ಸಂದರ್ಭದಲ್ಲಿ ಮಧ್ಯಮ ವರ್ಗದ ಜನರಿಗೆ ಅತ್ಯಂತ ಕಡಿಮೆ ವೆಚ್ಚದ ಕಾರು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕೀರ್ತಿಯಿದೆ. ಟಾಟಾ ನ್ಯಾನೋ ಮತ್ತು ಟಾಟಾ ಇಂಡಿಕಾ ಕಾರು ಒಂದು ಕಾಲದಲ್ಲಿ ದೊಡ್ಡ ಹೆಸರು ಮಾಡಿದ್ದವು. ಟಾಟಾ ಟೀ, ಟಾಟಾ ಮೋಟಾರ್ಸ್ ಮತ್ತು ಟಾಟಾ ಸ್ಟೀಲ್ ಸ್ಥಾಪಿಸಿದ್ದು ರತನ್ ಟಾಟಾ. ಅವರ ಉದ್ಯಮ ಸಾಧನೆ, ಸೇವಾ ಕಾರ್ಯ ಮೆಚ್ಚಿ ಕೇಂದ್ರ ಸರ್ಕಾರವು ಪದ್ಮಭೂಷಣ(PADMABHUSHAN), ಪದ್ಮ ವಿಭೂಷಣ ನೀಡಿ ಗೌರವಿಸಿದ್ದವು.
2024 ರಲ್ಲಿ ಅವರ ಒಟ್ಟಾರೆ ನಿವ್ವಳ ಆಸ್ತಿ ಮೊತ್ತವು 3800 ಕೋಟಿ ರೂಪಾಯಿ. ಇದರಲ್ಲಿ ದಾನ ಸೇವಾ ಕಾರ್ಯಗಳಿಗೆ ನೀಡಿದ ಹಣ ಸೇರ್ಪಡೆಯಾಗಿಲ್ಲ. ತಾವೂ ಗಳಿಸಿದ ಹಣದಲ್ಲಿ ಶೇಕಡಾ 60 ರಷ್ಟು ಹಣವನ್ನ ಸೇವಾ ಕಾರ್ಯಕ್ಕೆ ದಾನವಾಗಿ ನೀಡುತ್ತಿದ್ದರು. ದೇಶದ ಕೋವಿಡ್ ಹೋರಾಟಕ್ಕೆ 1,500 ಕೋಟಿ ರೂಪಾಯಿ ದೇಣಿಗೆ ನೀಡಿರುವುದು ಗಮನಾರ್ಹವಾಗಿದೆ.
ರತನ್ ಟಾಟಾ ನಿಧನದಿಂದಾಗಿ ಇಡೀ ಭಾರತ ದೇಶಕ್ಕೆ ತುಂಬುಲಾರದ ನಷ್ಟವಾಗಿದೆ. ಉದ್ಯಮ ವಲಯ ಆಘಾತಕ್ಕೆ ಒಳಗಾಗಿದೆ.
ಇದನ್ನು ಓದಿ : ಡ್ರೋನ್ ಹಾರಾಟದ ಜಾಡು ಹಿಡಿದ ಇಂಟಲಿಜೆನ್ಸ್