ಇ ಸಮಾಚಾರ ಡಿಜಿಟಲ್ ನ್ಯೂಸ್(esamachara  digital news)ಭಟ್ಕಳ(Bhatkal) : ಬಂಗಾರ  ಖರೀದಿಸಲು(Gold Purchase) ಕುಟುಂಬದೊಂದಿಗೆ  ಭಟ್ಕಳಕ್ಕೆ(Bhatkal) ಬಂದಿದ್ದ ಯುವಕನೋರ್ವ ನಾಪತ್ತೆಯಾದ ಪ್ರಕರಣವನ್ನ ಪೊಲೀಸರು‌ ಭೇದಿಸಿದ್ದಾರೆ.

ವಿದೇಶದಲ್ಲಿ ಕೆಲಸ ಮಾಡಿ  ಬಂದಿದ್ದ ಯುವಕನಿಗೆ ಮದುವೆ ಮಾಡಲು ಸಿದ್ದತೆ ನಡೆದು  ಚಿನ್ನ ಖರೀದಿಸಲು ಭಟ್ಕಳಕ್ಕೆ(Bhatkal) ಬಂದಾಗ ಆತ ಮಸೀದಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಮರಳಿ ಬಂದಿರಲಿಲ್ಲ.  ಸವಾಲಾಗಿದ್ದ ಪ್ರಕರಣಕ್ಕೆ ಭಟ್ಕಳ ಪೊಲೀಸರು(Bhatkal Police)  ತೆರೆ ಎಳೆದಿದ್ದಾರೆ.

ನಾಪತ್ತೆಯಾಗಿದ್ದ ಕುಮಟಾ ಮೂಲದ(Kumta Native) ಜಾಕೀರ ಬೇಗ್ (33) ಎಂಬಾತನನ್ನ ಪೊಲೀಸರು  ಈ ಪತ್ತೆ ಮಾಡಿದ್ದಾರೆ. ಕಳೆದ ಅಕ್ಟೋಬರ್ 18 ರಂದು ಜಾಕೀರ ಬೇಗ್ ತನ್ನ ಮದುವೆಗಾಗಿ ಚಿನ್ನಾಭರಣ(Marriage Gold) ಖರೀದಿಸಲು, ಅತ್ತಿಗೆ ಮತ್ತು ಸಂಬಂಧಿಕರೊಂದಿಗೆ ಭಟ್ಕಳಕ್ಕೆ ಬಂದಿದ್ದ. ಭಟ್ಕಳದ ನೂರಪಳ್ಳಿ ಮಸೀದಿಗೆ(Noor Masgid) ನಮಾಜ್‌ಗೆ ತೆರಳಿದ ಆತ ಮಧ್ಯಾಹ್ನ 1:15ರ ಸುಮಾರಿಗೆ ಮಸೀದಿಯಿಂದ ಹೊರಬಂದವನೆ   ನಾಪತ್ತೆಯಾಗಿದ್ದನು. ಸಂಬಂಧಿಕರ ಮನೆಗೂ ಹೋಗದೆ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಣ್ಮರೆಯಾಗಿದ್ದ ಜಾಕೀರನನ್ನು ಹುಡುಕಿ ಕುಟುಂಬಸ್ಥರು ಕಂಗಾಲಾಗಿದ್ದರು.

ಈ ಬಗ್ಗೆ  ಭಟ್ಕಳ ಶಹರ ಠಾಣೆಯಲ್ಲಿ‌(Bhatkal Town Station) ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದ ಪೊಲೀಸರು  ತಾಂತ್ರಿಕ ಜಾಡು ಹಿಡಿದಾಗ ಸಿಕ್ಕ ಸುಳಿವು ರೋಚಕವಾಗಿತ್ತು. ನಾಪತ್ತೆಯಾದ ಜಾಕೀರ, ತಾನು ಬಳಸುತ್ತಿದ್ದ ಮೊಬೈಲ್ ಫೋನ್ ಅನ್ನು ಮಾರಾಟ ಮಾಡಿದ್ದ.

ಇದರ ಜಾಡು ಹಿಡಿದು ಹೊರಟ  ಇನ್ಸಪೆಕ್ಟರ್ ದಿವಾಕರ್ ಪಿ.ಎಂ   ಹಾಗೂ ಪಿಎಸ್ಐ ನವೀನ ನಾಯ್ಕ ನೇತೃತ್ವದ ವಿಶೇಷ ತಂಡ, ನೇರವಾಗಿ  ತುಮಕೂರಿಗೆ ತೆರಳಿ ಹುಡುಕಾಡಿದ್ದಾರೆ. ಅಲ್ಲಿನ ಫ್ಯಾಕ್ಟರಿಯೊಂದರಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದ ಜಾಕೀರನನ್ನು ಪೊಲೀಸರು ಕೊನೆಗೂ ಪತ್ತೆಹಚ್ಚಿದ್ದಾರೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಮದುವೆ ಸಂಭ್ರಮ(Marriage Celebration) ಬಿಟ್ಟು ಇಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದದ್ದು ಅಚ್ಚರಿ ಮೂಡಿಸಿದೆ.

ಈತ ದುಬೈ ನಿಂದ ಐದು ವರ್ಷಗಳ ಕೆಲಸ ಮಾಡಿ ಊರಿಗೆ ಬಂದಿದ್ದ. ಆದರೆ ಕೈಯಲ್ಲಿ ಹೆಚ್ಚು ಹಣವಿರಲಿಲ್ಲ. ಬಂಗಾರ ಖರೀದಿಗೆ ಬರುವ ಮುಂಚೆ ಹುಬ್ಬಳ್ಳಿಯಲ್ಲಿ ತೆರಳಿ ಬಟ್ಟೆ ಖರೀದಿಸಿದ್ದರು. ಮತ್ತೆ ಹಣ ಇರಲಿಲ್ಲ. ಆತನ ಬಳಿ ಹಣ ಇರಬಹುದು ಎಂದು ಕುಟುಂಬಸ್ಥರು ಭಟ್ಕಳಕ್ಕೆ ಚಿನ್ನ ಖರೀದಿಸಲು ಬಂದಿದ್ದರು ಎನ್ನಲಾಗಿದೆ. ಹಣ ಇಲ್ಲದ ವಿಷಯವನ್ನ ಆತ ಮನೆಯವರಿಗೆ ಹೇಳಿರಲಿಲ್ಲ. ಮನೆಯವರು ಕೇಳಿರಲಿಲ್ಲ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭಟ್ಕಳ ಶಹರ ಠಾಣೆ ಪಿಎಸ್‌ಐ ನವೀನ್ ನಾಯ್ಕ ಮತ್ತು ಸಿಬ್ಬಂದಿಗಳಾದ ರವಿ ಪಟಗಾರ, ದೇವು ನಾಯ್ಕ, ಕಾಶಿನಾಥ ಹಾಗೂ ಟೆಕ್ನಿಕಲ್ ಸೆಲ್‌ನ ಉದಯ್ ಮತ್ತು ಬಬನ್ ಕದಂ ಅವರನ್ನೊಳಗೊಂಡ ತಂಡ, ಈ ಕ್ಲಿಷ್ಟಕರ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನು ಓದಿ : ಭಟ್ಕಳ ಮಹಿಳೆಗೆ ಆಶ್ಲೀಲ ಸಂದೇಶ. ಬೆಂಗಳೂರಿನಲ್ಲಿ ಆಸಾಮಿ ಬಂಧನ.

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಕಾರಿಗೆ ಬೆಂಕಿ. ಪ್ರಾಣಾಪಾಯದಿಂದ ಪಾರು.