ಭಟ್ಕಳ (BHATKAL): ಅರಣ್ಯ ಭೂಮಿಯನ್ನ (Forest Land) ಅತಿಕ್ರಮಿಸಿ (Enchrochament) ಕಬ್ಬಾ ಮಾಡಿರುವುದನ್ನ ಖುಲ್ಲಾಗೊಳಿಸಬೇಕೆಂದು ಒತ್ತಾಯಿಸಿ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಕುಕನೀರ ಗ್ರಾಮಸ್ಥರು ಭಟ್ಕಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ನೀಡಿದ್ದಾರೆ.
ಕುಕನೀರ(Kukaneer) ಮಜಿರೆಯ ಸರ್ವೆ ನಂ. 258 ಕ್ಷೇತ್ರ 0-02-00-00 ರಲ್ಲಿ ನಾಗವೇಣಿ ರಾಜು ಶೆಟ್ಟಿ ಎಂಬುವವರು ಈ ಹಿಂದೆ ಅಧಿಕೃತ ಅತಿಕ್ರಮಣಾದಾರರಾಗಿ ವಾಸ್ತವ್ಯ ಮಾಡಿದ್ದರು. ಕೆಲವು ವರ್ಷಗಳ ಹಿಂದೆ ಅವರು ಮನೆ ಬಿಟ್ಟು ಹೋಗಿದ್ದರು. ಆದರೆ ಈ ಜಾಗದಲ್ಲಿ ಕಳೆದ ಕೆಲವು ದಿನಗಳಿಂದ ಮೊಹಮ್ಮದ್ ಸಲೀಂ ಬಾಯೀದ್ ಅಕ್ತರ್ ಎಂಬ ವ್ಯಕ್ತಿ ಬಂದು ಕಾಮಗಾರಿ ಕೆಲಸ ಪ್ರಾರಂಭಿಸಿದ್ದರು. ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಆದರೆ ಆತ ಹೆಬಳೆಯ(Heble) ಬಾವಿಗದ್ದೆಯ ಚಣ್ಣಯ್ಯ ನಾಯ್ಕ ಎಂಬುವವರಿಗೆ ಹಣ ಕೊಟ್ಟು ಖರೀದಿ ಮಾಡಿರುವುದಾಗಿ ಅರಣ್ಯಧಿಕಾರಿ ಹಾಗೂ ಸ್ಥಳೀಯರಿಗೆ ಹೇಳಿದ್ದಾನೆ. ಈ ಅರಣ್ಯ ಜಾಗದಲ್ಲಿ ಮತ್ತೆ ಕೆಲಸ ಮಾಡಲು ಪ್ರಯತ್ನಿಸಿದಾಗ ಸ್ಥಳೀಯರು ವಲಯಾರಣ್ಯಾಧಿಕಾರಿ ಗಮನಕ್ಕೆ ತಂದಿದ್ದರು. ಜಾಗಕ್ಕೆ ಸಂಬಂಧಿಸಿ ಆರೋಪಿಯು ಯಾವುದೇ ದಾಖಲೆ ಹೊಂದಿರದಿದ್ದರೂ ಅರಣ್ಯ ಇಲಾಖೆಯ ಕಣ್ಣುತಪ್ಪಿಸಿ ಕಾಮಗಾರಿ ನಡೆಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದರು.
ಆದರೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿತ್ತು. ಸೂಕ್ತ ಬೇಲಿಯನ್ನೇ ಅಳವಡಿಸದ ಅರಣ್ಯ ಜಾಗವನ್ನು ಸಂರಕ್ಷಿಸಲು ಮುಂದಾಗದ ಅಧಿಕಾರಿಗಳ ನಡೆಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ತಕ್ಷಣ ಅತಿಕ್ರಮಣ ಖುಲ್ಲಾಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಇಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ನೀಡುವ ಸಂದರ್ಭದಲ್ಲಿ ಭಟ್ಕಳ ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಸ್ಥಳೀಯ ಗ್ರಾಮಸ್ಥರಾದ ವಸಂತ ದೇವಾಡಿಗ, ರವಿ ನಾಯ್ಕ, ರಾಮ ನಾಯ್ಕ, ಕೃಷ್ಣ ನಾಯ್ಕ ಮುಂತಾದವರು ಇದ್ದರು.
ಇದನ್ನು ಓದಿ : ಕುಡಿದ ಮತ್ತಿನಲ್ಲಿ ಸ್ನೇಹಿತನ ಹತ್ಯೆ
ಗೋವು ಕಳ್ಳತನ ಮಾಡಿದ ಆಸಾಮಿಗಳಿಗೆ ಸಖತ್ ಡ್ರಿಲ್
ದಾಂಡೇಲಿಯಲ್ಲಿ ಬಟ್ಟೆ ಪ್ಯಾನ್ಸಿ ಅಂಗಡಿಯಲ್ಲಿ ಕಳ್ಳಿಯರು. ಬೆಳಗಾವಿಯಲ್ಲಿ ಧರ್ಮದೇಟು