ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಜುಲೈ 23 ಮತ್ತು 24ರಂದು  ಎರಡು ದಿನಗಳ ಕಾಲ ನಡೆಯಲಿರುವ ಪ್ರಸಿದ್ಧ ಮಾರಿಜಾತ್ರೆಗೆ(Marijatre) ಪೂರ್ವಭಾವಿ ತಯಾರಿ ಹಾಗೂ ಭದ್ರತಾ ವ್ಯವಸ್ಥೆಗಳ ಪರಿಶೀಲನೆಯ ನಿಮಿತ್ತ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ದೀಪನ್ ಎಂ.ಎನ್. ಭಟ್ಕಳಕ್ಕೆ ಭೇಟಿ ನೀಡಿದರು.

ಎಸ್‍ಪಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಭಟ್ಕಳಕ್ಕೆ ಆಗಮಿಸಿದ ಅವರು, ಶ್ರೀ ಮಾರಿಕಾಂಬಾ ದೇವಸ್ಥಾನ(Sri Marikamba Temple) ಹಾಗೂ ಮಾರಿ ವಿಸರ್ಜನೆ ನಡೆಯುವ ಜಾಲಿ ಕಡಲ ತೀರವನ್ನು(Jali  Beach) ವೀಕ್ಷಿಸಿದರು. ಮಾರಿ ದೇವರ ಮೆರವಣಿಗೆಯ ಮಾರ್ಗ, ಸಾರ್ವಜನಿಕ ಸುರಕ್ಷತೆ, ಹಾಗೂ ಸಾರ್ವಜನಿಕರು ಸೇರಿರುವ ಸಂದರ್ಭದ ವ್ಯವಸ್ಥೆಗಳ ಕುರಿತು ಸ್ಥಳೀಯ ಪೊಲೀಸರೊಂದಿಗೆ ಚರ್ಚೆ ನಡೆಸಿದರು.

ಇದೇ ವೇಳೆ ದೇವಸ್ಥಾನಕ್ಕೆ ಆಗಮಿಸಿದ ಎಸ್‍ಪಿಗೆ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷ ಪರಮೇಶ್ವರ ನಾಯ್ಕ, ಶ್ರೀಧರ ನಾಯ್ಕ, ಶ್ರೀಪಾದ ಕಂಚುಗಾರ, ಮಾರುತಿ ಆಚಾರಿ ಸೇರಿದಂತೆ ಇತರರು ಸ್ವಾಗತಿಸಿದರು. ಐತಿಹಾಸಿಕ ಜಾತ್ರೆಯ ಹಿನ್ನೆಲೆ, ನಿರ್ವಹಣಾ ಕಾರ್ಯಚಟುವಟಿಕೆಗಳ ಕುರಿತು ವಿವರ ಪಡೆದರು.

ನಂತರ  ಎಸ್‍ಪಿ ದೀಪನ್ ಅವರು ಡಿವೈಎಸ್ಪಿ ಕಚೇರಿಗೆ ತೆರಳಿ, ವಿವಿಧ ಧರ್ಮದ ಮುಖಂಡರೊಂದಿಗೆ ಶಾಂತಿ, ಸುವ್ಯವಸ್ಥೆ, ಮತ್ತು ಸಹಕಾರದ ಕುರಿತು ಸಭೆ ನಡೆಸಿದರು.  ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಮುದಾಯಗಳ ಸಹಕಾರ ಅಗತ್ಯ ಎಂದು ದೀಪನ್ ಅಭಿಪ್ರಾಯಪಟ್ಟರು.

ಸಭೆಯಲ್ಲಿ ಡಿವೈಎಸ್ಪಿ ಮಹೇಶ, ಸಿಪಿಐ ದಿವಾಕರ, ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಪುರಸಭಾ ಉಪಾಧ್ಯಕ್ಷ ಆಲ್ತಾಫ್ ಖರೂರಿ, ಬಿಜೆಪಿ ಮುಖಂಡ ಗೋವಿಂದ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಭಟ್ಕಳ ಮಜ್ಲಿಸೇ ಇಸ್ಲಾ ವ ತಂಜೀಮ್ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುರಕೀಬ್ ಎಂ.ಜೆ., ಇಮ್ರಾನ್ ಲಂಕಾ ಮತ್ತು ಇತರರು ಭಾಗವಹಿಸಿದ್ದರು.

ಇದನ್ನು ಓದಿ : ಭಟ್ಕಳದ ಡಾ. ಭಾಗೀರಥಿ ನಾಯ್ಕ ಗೆಬೆಸ್ಟ್  ಅಸೋಸಿಯೇಟ್ ಪ್ರೊಫೆಸರ್ ಪ್ರಶಸ್ತಿ

ಅಂಕೋಲಾದಲ್ಲಿ ಸೇತುವೆ ಮೇಲಿಂದ ಪಲ್ಟಿಯಾಗಿ ಬಿದ್ದ ಬಸ್. ಓರ್ವ ದುರ್ಮರಣ. ಹಲವರಿಗೆ ಗಾಯ.

ಕುಮಟಾದಲ್ಲಿ ಕೋಳಿ ಪಡೆಗೆ ಬಂದವರು ಎಸ್ಕೇಪ್. ಕೋಳಿಗಳಿಗೆ ಶಿಕ್ಷೆ.

ಉತ್ತರಕನ್ನಡ ಮೂಲದ ಪಿಎಸ್ಐ ಆತ್ಮಗೆ ಶರಣು. ಹಿರಿಯ ಅಧಿಕಾರಿಗಳಿಂದ ಪರಿಶೀಲನೆ