ಕಾರವಾರ(Karwar) :  ಹಿರಿಯ ನಾಗರಿಕರ (Senior Citizens) ರಕ್ಷಣಾ ಕಾಯಿದೆ 2007ಹಾಗೂ ಅಧಿನಿಯಮ 2009ರ ಅಡಿ ರಾಜ್ಯದಲ್ಲಿ ಇರುವ ಹಿರಿಯ ನಾಗರಿಕರ ಪರಿಷ್ಕ್ರತ ಪಟ್ಟಿಯನ್ನು ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ತೆರೆಯುವoತೆ ಸೂಚನೆ ನೀಡಬೇಕೆಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಎಸ್ಪಿ ಅವರಿಗೆ ಮನವಿ ನೀಡಿದೆ.

ಕಾರವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ (Supredendent of Police) ಮೂಲಕ ಗೃಹ ಸಚಿವ ಜಿ ಪರಮೇಶ್ವರ್(Home Minister G Parameshwar)  ಸಾರ್ವಜನಿಕರ ಸಹಿ ಇರುವ ಮನವಿ ಸಲ್ಲಿಸಲಾಯಿತು.  ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರ ಮೇಲೆ  ಹಲ್ಲೆ ಪ್ರಕರಣ ಹೆಚ್ಚಾಗ್ತಾ  ಇದೆ. 2009ರ ಕಾಯಿದೆ ಪ್ರಕಾರ ಒಂಟಿ ಹಿರಿಯ ನಾಗರಿಕರ ಮನೆಗೆ ಭೇಟಿ ನೀಡಬೇಕು. ಪೊಲೀಸ್ ಇಲಾಖೆಯಿಂದ(Police Department) ಭೇಟಿ ನೀಡಿ ಅವರ ಬಗ್ಗೆ ಪರಿಷ್ಕತ ಪಟ್ಟಿ ಯನ್ನು ತಯಾರಿಸಿ ಅಪರಾಧ ಸ್ಥಿತಿ ಗತಿಯ ಬಗ್ಗೆ ಪ್ರತಿ ತಿಂಗಳು 20ತಾರೀಕಿನ ಒಳಗಾಗಿ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು ಜಿಲ್ಲಾ ನ್ಯಾಯಾಧೀಶರಿಗೆ ಸಲ್ಲಿಸಬೇಕು ಎಂದು ಕಾಯಿದೆಯಲ್ಲಿ ಉಲ್ಲೇಖ ಇದೆ.

ಮಕ್ಕಳು ತಂದೆಗೆ ಜೀವನಾoಶ  ನೀಡಬೇಕೆಂದು ಎಸಿ ಯವರು ಆದೇಶ ಮಾಡುತ್ತಾರೆ. ಕೊಡದೆ ಇದ್ದ ಪಕ್ಷದಲ್ಲಿ ಮಕ್ಕಳಿ ಗೆ ಎಸಿ ವಾರೆoಟು ಜಾರಿ ಮಾಡುತ್ತಾರೆ. ಆ ವಾರೆಂಟು ಎಸ್ಪಿ ಕಚೇರಿಗೆ ಬಂದು ಜಾರಿ ಮಾಡುವಲ್ಲಿ  ವಿಳಂಭವಾಗುತ್ತದೆ. ಇದನೆಲ್ಲ ಸರಿಯಾದ ಕ್ರಮದಲ್ಲಿ ಆಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟರ ಮೂಲಕ ಮನವಿ ಸಲ್ಲಿಸಲಾಯಿತು.

ಮನವಿ ನೀಡುವ ಸಂದರ್ಭದಲ್ಲಿ 80ವರ್ಷದ ಜಾನ್ ಬೆರ್ರೋಟೊ ಅವರಿಗೆ  ಎಸ್ಪಿ ನಾರಾಯಣ ಅವರು ಗುಲಾಬಿ ಹೂ ಹಾಗೂ ಸ್ವೀಟ್ ಕೊಟ್ಟು ಗೌರವಿಸಿದರು. ಈ ಸಂದರ್ಭದಲ್ಲಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್,  ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ,  ಮಂಜುನಾಥ ಇದ್ದರು.

ಇದನ್ನು ಓದಿ : ಗೋವು ಕಳ್ಳರನ್ನ ಬಂಧಿಸಿ. ತಂಜಿಮ್ ಸಂಸ್ಥೆ ಆಗ್ರಹ.

ಮನೆ ಗೋಡೆ ಒಡೆದು ಅಡಿಕೆ ಕದ್ದ. ಪೊಲೀಸರಿಗೆ ಸಿಕ್ಕಿ ಬಿದ್ದ

ಕಾರವಾರ ರನ್ ಎಂಡ್ ಟ್ರೈಥ್ಲಾನ್ ಓಟದಲ್ಲಿ ಸುದರ್ಶನ್ ತಾಂಡೇಲ್ ರನ್ನರ್ಸ್ ಅಪ್