ಕುಮಟಾ(KUMTA) : ಮೀನು ಹಿಡಿಯಲು ಹೋದ ವ್ಯಕ್ತಿ ನದಿಯ ಹಿನ್ನೀರಲ್ಲಿ ಮುಳುಗಿ ಮೃತ ಪಟ್ಟ ಘಟನೆ ತಾಲೂಕಿನ ಬೆಟ್ಕುಳಿಯಲ್ಲಿ ನಡೆದಿದೆ.
ದಾವುದ್ ಅಲಿ ಘಾರಿಯಾ (68) ಎಂಬಾತ ಮೃತ ಪಟ್ಟ ವ್ಯಕ್ತಿಯಾಗಿದ್ದಾನೆ. ಇವರು ಬರ್ಗಿ ಗ್ರಾಮ ಪಂಚಾಯತ(GRAMA PANCHAYAT) ಸದಸ್ಯರೆಂದು ತಿಳಿದುಬಂದಿದೆ.
ದಾವೂದ್ ಬೆಟ್ಕುಳಿ ಸಮೀಪದ ಅಘನಾಶಿನಿ(AGHANASHINI) ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆಂದು ಗೊತ್ತಾಗಿದೆ.
ಸತತ ಮೂರು ಬಾರಿ ಬರ್ಗಿ ಗ್ರಾಮ ಪಂಚಾಯತ್‌ಗೆ ಬೆಟ್ಕುಳಿ ವಾರ್ಡ್‌ನಿಂದ ಆಯ್ಕೆಯಾಗುತ್ತಾ ಬಂದಿದ್ದರು. ಕಳೆದ ಅವಧಿಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದರು. ಹಾಲಿ ಬರ್ಗಿ ಗ್ರಾಮ ಪಂಚಾಯತ ಸದಸ್ಯರಾಗಿದ್ದ ದಾವೂದ್ ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಅವರ ಆಕಸ್ಮಿಕ ಸಾವಿಗೆ ಗ್ರಾಮಸ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವಾಹನ ಡಿಕ್ಕಿ