ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ನಿಕೋಟಿನ್ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವನನ್ನು ಭಟ್ಕಳ ಪೊಲೀಸರು(Bhatkal Police) ಬಂಧಿಸಿದ್ದಾರೆ.
ಮಕ್ಬುಲ್ ಇಸ್ಮಾಯಿಲ್ ಮೆಡಿಕಲ್ (50) ಬಂಧಿತ ಆರೋಪಿ. ಈತ ಬಂದರ ರಸ್ತೆಯ ಮುಗ್ದುಂಕಾಲೋನಿ ನಿವಾಸಿ ಎಂದು ತಿಳಿದುಬಂದಿದೆ. ಭಟ್ಕಳ ಶಹರದ ಹೂವಿನ ಚೌಕ ಹತ್ತಿರದ ಟೌನ್ ಸೆಂಟರಲ್ಲಿರುವ ರಿಮ್ಸ ಅಂಗಡಿಯಲ್ಲಿ ಸುಮಾರು 2,39,000 ರೂಪಾಯಿ ಮೌಲ್ಯದ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್(Electronic Cigarate) ಮತ್ತು ನಿಕೋಟಿನ್ ವ್ಯಾಪ್ಸ್ ಇಟ್ಟುಕೊಂಡಿದ್ದನು. ಖಚಿತ ಮಾಹಿತಿ ಪಡೆದ ಭಟ್ಕಳ ಶಹರ ಪೊಲೀಸ್ ಠಾಣೆ(Bhatkal Town Police) ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಒಟ್ಟು 51 ಇಲೆಕ್ಟ್ರಾನಿಕ್ ಸಿಗರೇಟ್ಗಳು ಮತ್ತು ಒಟ್ಟು 154 ಸಿಗರೇಟಿಗೆ ತುಂಬುವ ನಿಕೋಟಿನ್ ಲಿಕ್ವಿಡ್ ರಿಪಿಲ್ (Vapes)ಗಳನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್. ಎಂ.ಎನ್. ಅಡಿಶನಲ್ ಎಸ್ಪಿ ಕೃಷ್ಣಮೂರ್ತಿ. ಜಿ , ಜಗದೀಶ, ಡಿವೈಎಸ್ಪಿ ಮಹೇಶ ಎಂ.ಕೆ ಮಾರ್ಗದರ್ಶನದಲ್ಲಿ, ಭಟ್ಕಳ ಶಹರ ಪೋಲಿಸ್ ಠಾಣೆಯ ಪೋಲಿಸ್ ಇನ್ಸಪೆಕ್ಟರ್ ದಿವಾಕರ ಪಿ ಎಮ್ ರವರ ನೇತೃತ್ವದಲ್ಲಿ ಭಟ್ಕಳ ಶಹರ ಪೊಲೀಸ ಠಾಣೆಯ ಪಿ.ಎಸ್.ಐ ನವೀನ. ಎಸ್. ನಾಯ್ಕ, ಪಿ.ಎಸ್.ಐ ತಿಮ್ಮಪ್ಪ. ಎಸ್. ಮತ್ತು ಸಿಬ್ಬಂದಿಗಳಾದ ದಿನೇಶ ನಾಯಕ, ದೀಪಕ ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಜಗದೀಶ ನಾಯ್ಕ, ಕೃಷ್ಣಾ ಎನ್.ಜಿ, ಮಲ್ಲಿಕಾರ್ಜುನ ಉಟಗಿ, ಕಿರಣ ಪಾಟೀಲ್, ಲೊಕೇಶ ಕತ್ತಿ, ರೇವಣಸಿದ್ದಪ್ಪ ಮಾಗಿ ಮತ್ತು ಬೀಟ್ ಸಿಬ್ಬಂದಿ ವಿಶ್ವನಾಥ ಬೇವಿನಗಿಡದ ಮತ್ತು ಅಮಗೋತ ಮಹೇಶ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನು ಓದಿ : ಅರಬ್ಬಿ ಸಮುದ್ರದಲ್ಲಿ ಬೋಟು ದುರಂತ: 30 ಮೀನುಗಾರರ ರಕ್ಷಣೆ.
	
						
							
			
			
			
			
