ಕುಮಟಾ(KUMTA) : ಆಕಸ್ಮಿಕ ಗುಂಡು ತಗುಲಿ ಯುವಕನೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಕತಗಾಲ ಗ್ರಾಮದಲ್ಲಿ ಬಳಿ ಸಂಭವಿಸಿದೆ.
ಪ್ರಥಮ ಸುಬ್ಬು ನಾಯ್ಕ (35) ಮೃತ ಯುವಕ ಎಂದು ಗುರುತಿಸಲಾಗಿದೆ. ರಾತ್ರಿ ಕೋಳಿ ಫಾರ್ಮ್ ಗೆ ಬರುತ್ತಿರುವ ಹೆಬ್ಬಾವನ್ನು ಓಡಿಸಲು ನಾಡ ಬಂದೂಕಿನ(COUNTRY MADE PISTUL) ಮೂಲಕ ಫೈರ್(FIRE) ಮಾಡಿದನೆನ್ನಲಾಗಿದೆ. ಗುಂಡು ಗುರಿ ತಪ್ಪಿ ಪ್ರಥಮಗೆ ತಗುಲಿರುವ ಶಂಕೆ ಇದೆ.
ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ (KUMTA POLICE STATION) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಜಮೀನು ರಕ್ಷಣೆಗೆ ಬೇಲಿ ಹಾಕುತ್ತಿದ್ದ ರೈತನ ಮೇಲೆ ಕರಡಿ ದಾಳಿ
ಕೆರೆಗೆ ಮೀನು ಬಿಟ್ಟು ವಿನೂತನ ಶೃದ್ಧಾಂಜಲಿ
ಯುರೋಪಿನಲ್ಲಿ ರಾಷ್ಟ್ರಗೀತೆ ಮೊಳಗಿಸಿದ ಪುಟ್ಟ ಪೋರಿ