ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ತಾಲೂಕಿನ ಪುರವರ್ಗ ಪ್ರದೇಶದಲ್ಲಿ ಬೈಕ್‌ಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದ ಘಟನೆ ನಡೆದಿದೆ. ಘಟನೆಯಿಂದಾಗಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಪುರವರ್ಗ(Puravarga) 3ನೇ ಕ್ರಾಸ್‌ನ ಗಂಗಾವಳಿ ನಿವಾಸಿ ಅಬ್ದುಲ್ ವಾಹೀದ್ ಅವರ ಮನೆಯಲ್ಲಿ ಗುರುವಾರ ರಾತ್ರಿ ಅಕ್ರಮ ಪ್ರವೇಶ ಮಾಡಿದ ಕಿಡಿಗೇಡಿಗಳು ಅಂಗಳದಲ್ಲಿ ನಿಲ್ಲಿಸಿದ್ದ ಹೀರೋ ಹೊಂಡಾ ಪ್ಯಾಶನ್ ಪ್ಲಸ್ ಹಾಗೂ ಟಿವಿಎಸ್ ಅಪಾಚಿ ಬೈಕ್‌ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪರಿಣಾಮವಾಗಿ ಎರಡು ವಾಹನಗಳು ಭಸ್ಮವಾಗಿದ್ದು, ಮನೆಯ ಅಂಗಳದ ತಗಡಿನ ಶೀಟ್ ಹಾಗೂ ಹಾಲ್ ಭಾಗಕ್ಕೂ ಹಾನಿಯಾಗಿದೆ.
ಕೃತ್ಯಕ್ಕೆ ಸಂಬಂಧಿಸಿ, ಪಕ್ಕದ ಮನೆಯಲ್ಲಿ ವಾಸಿಸುವ ತೌಸಿಪ್ ಸಲಾವುದ್ದಿನ್ ಜಬಾಲಿ ಮತ್ತು ಸಾದ್ ಸಲಾವುದ್ದಿನ್ ಜಬಾಲಿ ಇವರ ಮೇಲೆ ದೂರುದಾರರು ಸಂಶಯ ವ್ಯಕ್ತಪಡಿಸಿದ್ದಾರೆ.
ಜುಲೈ 25ರಂದು ಇದೇ ಮನೆಯ ಮುಂಬದಿಯಲ್ಲಿ ನಿಲ್ಲಿಸಿದ್ದ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳವು ಮಾಡಿ ಪಕ್ಕದ ರಸ್ತೆಯಲ್ಲಿ ಬೆಂಕಿ ಹಚ್ಚಲಾಗಿತ್ತು. ಒಂದೇ ತಿಂಗಳಲ್ಲಿ ಈ ಮನೆಗೆ ಸೇರಿದ ಮೂರು ಬೈಕ್‌ಗಳು ಬೆಂಕಿಗೆ ಆಹುತಿಯಾದ ಘಟನೆ ಪುರವರ್ಗದಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ.
ಘಟನೆಯಿಂದಾಗಿ ಎಸ್‌ಪಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಎಂ., ಡಿವೈಎಸ್ಪಿ ಮಹೇಶ್ ಹಾಗೂ ಸಿಪಿಐ ದಿವಾಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ(Police Investigation) ನಡೆಸಿದ್ದಾರೆ.
ಇದನ್ನು ಓದಿ : ಇನ್ಮುಂದೆ ಭಟ್ಕಳ ನಗರಸಭೆ. ಜಾಲಿ ಮತ್ತು ಹೆಬಳೆ ನಗರಸಭೆಗೆ.